IPL ಗೆ ದೀಪಕ್ ಡೌಟ್.. ಸಿಎಸ್ ಕೆಗೆ ಭಾರಿ ಆಘಾತ..
ಮಂಡಿರಜ್ಜು ಗಾಯದಿಂದ ಶ್ರೀಲಂಕಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾದ ಆಲ್ ರೌಂಡರ್ ದೀಪಕ್ ಚಹಾರ್ ಈ ಬಾರಿಯ ಐಪಿಎಲ್ ಗೂ ದೂರವಾಗುವ ಸಾಧ್ಯತೆಗಳಿವೆ.
ಒಂದು ವೇಳೆ ದೀಪಕ್ ಚಹಾರ್ ಐಪಿಎಲ್ ನಿಂದ ದೂರ ಉಳಿದರೇ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹಿನ್ನೆಡೆಯಾಗುವ ಸಾಧ್ಯತೆಗಳಿವೆ.
ಯಾಕಂದರೇ ಚೆನ್ನೈ ಫ್ರಾಂಚೈಸಿ ದೀಪಕ್ ಚಹಾರ್ ಅವರನ್ನು ಮೆಗಾ ಹರಾಜಿನಲ್ಲಿ 14 ಕೋಟಿ ಕೊಟ್ಟು ಖರೀದಿ ಮಾಡಿದೆ.
ಕಳೆದ ಸೀಸನ್ ನಲ್ಲಿ ಚೆನ್ನೈ ತಂಡ ಪ್ರಶಸ್ತಿ ಗೆಲ್ಲುವಲ್ಲಿ ದೀಪಕ್ ಚಹಾರ್ ಪ್ರಮುಖ ಪಾತ್ರವಹಿಸಿದ್ದರು.
ಬೌಲಿಂಗ್, ಬ್ಯಾಟಿಂಗ್ ನಲ್ಲಿ ದೀಪಕ್ ಚಹಾರ್ ಅದ್ಭುತ ಪ್ರದರ್ಶನ ನೀಡಿದ್ದರು.
ಈಡನ್ ಗಾರ್ಡನ್ ನಲ್ಲಿ ವಿಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಚಹಾರ್ ಗಾಯಗೊಂಡಿದ್ದರು.
ದೀಪಕ್ ಚಾಹರ್ ಪ್ರಸ್ತುತ ಬೆಂಗಳೂರಿನ ಎನ್‌ಸಿಎ ಅಕಾಡೆಮಿಯಲ್ಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೀಪಕ್ ಚಹಾರ್ ಗೆ ಮೂರು ಗಾಯಗಳಾಗಿವೆ.
ipl-deepak-chahar-may-ruled-out-ipl-2022









