IPL | ಆರ್ ಸಿಬಿ ನಾಯಕತ್ವ ತ್ಯಜಿಸಲು ಕಾರಣ ಬಿಚ್ಚಿಟ್ಟ ವಿರಾಟ್
ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಯಲು ಕಾರಣವೇನು ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರ ಕೊಟ್ಟಿದ್ದಾರೆ.
ಆರ್‌ಸಿಬಿ ಪೊಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ನನ್ನ ಈ ನಿರ್ಧಾರದಿಂದ ಯಾರು ಶಾಕ್ ಆಗಬೇಕಿಲ್ಲ.
ಯಾಕಂದ್ರೆ ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ಯೋಚನೆ ಮಾಡಿಯೇ ನಾನು ನಿರ್ಧಾರ ತೆಗೆದುಕೊಂಡಿರುವುದು.
ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಹಾಗೇ ನನ್ನ ಜವಾಬ್ದಾರಿಯನ್ನು ಕಮ್ಮಿ ಮಾಡಿಕೊಳ್ಳಬೇಕಿತ್ತು.
ಅದಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಅಂತ ಇಝಿಯಾಗಿಯೇ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ನಾನು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ.
ನನ್ನ ನಿರ್ಧಾರ ಸ್ಪಷ್ಟವಾಗಿರುವಾಗ ನಾನು ಕಾಯುವುದಕ್ಕೆ ಇಷ್ಟಪಡಲ್ಲ. ನನಗೆ ಆಟದ ಗುಣಮಟ್ಟ ಮುಖ್ಯ.
ಆ ನಿಟ್ಟಿನಲ್ಲಿ ನಾನು ನನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂದಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕ ಯಾರು ಎಂಬ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾದ ಸ್ಟಾರ್ ಫಾಫ್ ಡುಪ್ಲೆಸಿಸ್ ಗೆ ನಾಯಕನ ಪಟ್ಟ ದೊರಕುವ ಸಾಧ್ಯತೆಗಳಿವೆ.
ipl-kohli-reveals-why-he-stepped-down-rcb-captain









