ಸೆಪ್ಟಂಬರ್ ನಲ್ಲಿ ಮತ್ತೆ ಐಪಿಎಲ್ ಟೂರ್ನಿ ಶುರು…!
ಕೋವಿಡ್ ನಡುವೆಯೂ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ. ಹೌದು, ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಮತ್ತೆ ಆರಂಭವಾಗುತ್ತಿದೆ.
ಈ ಬಗ್ಗೆ ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಮುಂಬರುವ ಸೆಪ್ಟಂಬರ್ 18 ಅಥವಾ 19ರಿಂದ ಆರಂಭವಾಗುವ ಸಾಧ್ಯತೆಗಳಿವೆ. ಫೈನಲ್ ಪಂದ್ಯ ಅಕ್ಟೋಬರ್ 9 ಅಥವಾ 10 ರಂದು ನಡೆಯಲಿದೆ. ಅಂದ ಹಾಗೇ ಈ ಪಂದ್ಯಗಳು ಯುಎಇನಲ್ಲಿ ನಡೆಯುವ ಸಾಧ್ಯತೆಗಳು ದಟ್ಟವಾಗಿದೆ.
ಒಟ್ಟು 31 ಪಂದ್ಯಗಳು ನಡೆಯಲಿದ್ದು, ಈ ಕುರಿತಂತೆ ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳ ಜೊತೆ ಚರ್ಚೆ ಕೂಡ ಮಾಡಲಿದೆ.
ಸೆಪ್ಟಂಬರ್ ನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸ ಕೂಡ ಮುಗಿಯಲಿದೆ. ಈ ಟೆಸ್ಟ್ ಸರಣಿ ಮುಗಿದ ತಕ್ಷಣವೇ ಐಪಿಎಲ್ ಟೂರ್ನಿಯನ್ನು ಆಯೋಜಿಸಿ ಆಗುವಂತಹ 2500 ಕೋಟಿ ರೂಪಾಯಿ ಸರಿದೂಗಿಸುವ ಲೆಕ್ಕಚಾರದಲ್ಲಿದೆ ಬಿಸಿಸಿಐ.
ಇನ್ನೊಂದೆಡೆ ಸೆಪ್ಟಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಬೇಕಿದ್ದ ಟಿ-ಟ್ವೆಂಟಿ ಸರಣಿಯನ್ನು ರದ್ದುಗೊಳಿಸಲಾಗಿದೆ. ಹಾಗೇ ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕೂಡ ಮುಂದೂಡಲಾಗಿದೆ.








