ಐಪಿಎಲ್ ನಲ್ಲಿ ಒಂದು “ಮುತ್ತಿನ ಕಥೆ”
ಮುಂಬೈ : ಕೊರೊನಾ ಕಾಟ ಮಧ್ಯೆ ಈ ಬಾರಿಯ ಐಪಿಎಲ್ ಸುಸೂತ್ರವಾಗಿ ನಡೆಯುತ್ತಿದೆ. ಮೈದಾನದಲ್ಲಿ ಪ್ರೇಕ್ಷಕರಿಲ್ಲ ಅನ್ನೋ ವ್ಯತ್ಯಾಸ ಬಿಟ್ಟರೇ ಇನ್ನುಳಿದಂತೆ ಐಪಿಎಲ್ ಎಂದಿನಂತೆ ಕಿಕ್ ನೀಡುತ್ತಿದೆ. ಇದನ್ನ ಹೊರತಾಗಿ ಈ ಬಾರಿ ಐಪಿಎಲ್ ನಲ್ಲಿ ಒಂದು “ಮುತ್ತಿನ” ಕಥೆ ಭಾರಿ ಸದ್ದು ಮಾಡುತ್ತಿದೆ.
ಹೌದು..! ಐಪಿಎಲ್ ಅಂದ್ರೆ ಹಾಗೇನೆ ಇಲ್ಲಿ ಪ್ರತಿಯೊಂದು ಸಣ್ಣ ವಿಚಾರವೂ ಭಾರಿ ಸುದ್ದಿಯಾಗುತ್ತೆ. ಹೇಗೆ ಆಲ್ ಫೀಲ್ಡ್ ನಲ್ಲಿ ನಡೆಯೋ ರಣರೋಚಕ ಕ್ಷಣಗಳು ಪ್ರೇಕ್ಷರಿಕರಿಗೆ ಕಿಕ್ ನೀಡುತ್ತವೋ.. ಅದೇ ಮಾದರಿಯಲ್ಲಿ ಆನ್ ಫೀಲ್ಡ್ ನಲ್ಲಿ ನಡೆಯುವ ಕೆಲವೊಂದು ವಿಷಯಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತವೆ.
ಅಂದಹಾಗೆ ಈ ಬಾರಿ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿರುವ ಸುದ್ದಿ ಅಂದ್ರೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿಯವರಿಗೆ ಮೈದಾನದಲ್ಲಿ ಬಯೋ ಬಬಲ್ ನಲ್ಲೇ ಇದ್ದುಕೊಂಡು ಮುತ್ತು ಕೊಟ್ಟಿರೋದು.
ಇದ್ರಲ್ಲಿ ಏನೀದೆ..? ಎಷ್ಟೋ ಬಾರಿ ಬ್ಯಾಟ್ಸ್ ಮೆನ್ ಗಳು ಸೆಂಚೂರಿ ಹೊಡೆದಾಗ ತಮ್ಮ ಪ್ರೇಯಸಿ/ ಪತ್ನಿಗೆ ಮುತ್ತು ಕೊಟ್ಟಿರೋದನ್ನ ನೋಡಿದ್ದೇವೆ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಇದು ಬೇರೆಯದ್ದೇ ಕಹಾನಿ..!
ಸದ್ಯ ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಐಪಿಎಲ್ ಯಲ್ಲಿ ಕೊರೊನಾ ಕಾರಣ ಆಟಗಾರರು ಬಯೋ ಬಬಲ್ ನಲ್ಲಿದ್ದಾರೆ. ಇದರಿಂದ ತಮ್ಮ ಕುಟುಂಬದವರನ್ನು ಕೂಡ ಭೇಟಿಯಾಗುವ ಅವಕಾಶವಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಮಾತ್ರ ಬಯೋ ಬಬಲ್ ನಲ್ಲಿದ್ದುಕೊಂಡೆ ತಮ್ಮ ಆಟವನ್ನು ನೋಡಲು ಬಂದ ಪತ್ನಿ ದೇವಿಶಾ ಶೆಟ್ಟಿಯವರಿಗೆ ಗಾಜಿನ ತಡೆಗೊಡೆಯ ಒಂದು ಬದಿಯಲ್ಲಿ ನಿಂತು ಮುತ್ತು ಕೊಡಲು ಪ್ರಯತ್ನಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ದೇವಿಶಾ ಶೆಟ್ಟಿ ಇನ್ನೊಂದು ಬದಿಯಲ್ಲಿ ತಮ್ಮ ಕೆನ್ನೆಯನ್ನು ತೋರಿಸುವ ಮೂಲಕ ಪರಸ್ಪರ ಪ್ರೀತಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.










