ದುಬೈ : 13 ಆವೃತ್ತಿಯ ಐಪಿಎಲ್ ನಲ್ಲಿ IPL ಇಂದಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (rajasthan royals) ತಂಡ ಮುಖಾಮುಖಿಯಾಗಿವೆ. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರು ತಂಡಕ್ಕೆ 178 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಆರ್ ಆರ್ ತಂಡದ ನಾಯಕ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಐಪಿಎಲ್-2020ಯಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಬಂದ ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿ 5ನೇ ಓವರಿನ 4ನೇ ಬಾಲಿನಲ್ಲಿ 15 ರನ್ ಗಳಿಸಿದ್ದ ಬೆನ್ ಸ್ಟೋಕ್ಸ್ ಅವರು ಕ್ರಿಸ್ ಮೋರಿಸ್ ಅವರಿಗೆ ಔಟ್ ಆದರು.
ಬಳಿಕ ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಉತ್ತಪ್ಪ 22 ಬಾಲಿಗೆ 41 ರನ್ ಗಳಿಸಿ ಚಹಲ್ ಅವರ ಸ್ಪಿನ್ ಮೋಡಿಗೆ ಬಲಿಯಾದರು.
ಇದಾದ ನಂತರದ ಬಾಲಿನಲ್ಲೇ ಸಂಜು ಸ್ಯಾಮ್ಸನ್ ಅವರು 9 ರನ್ ಗಳಿಸಿ ಯಜ್ವೇಂದ್ರ ಚಹಲ್ ಎಸೆತದಲ್ಲಿ ಕ್ರಿಸ್ ಮೋರಿಸ್ ಕ್ಯಾಚ್ ಕೊಟ್ಟು ಹೊರನಡೆದರು.
ನಂತರ ನಾಯಕ ಸ್ಟೀವ್ ಸ್ಮಿತ್ ಗೆ ಜೊತೆಯಾದ ಜೋಸ್ ಬಟ್ಲರ್ 12ನೇ ಓವರಿನಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಇದನ್ನೂ ಓದಿ : ಕೆಕೆಆರ್ ನಾಯಕತ್ವ ಬದಲಾವಣೆ : ಗೌತಮ್ ಗಂಭೀರ್ ಕಿಡಿ
ಜೊತೆಗೆ 43 ಬಾಲಿಗೆ ಬಟ್ಲರ್ ಮತ್ತು ಸ್ಮಿತ್ ಜೋಡಿ ಅರ್ಧಶತಕದ ಜೊತೆಯಾಟವಾಡಿತು.
ಈ ವೇಳೆ ದಾಳಿಗೆ ಇಳಿದ ಕ್ರಿಸ್ ಮೋರಿಸ್ 25 ಬಾಲಿಗೆ 24 ರನ್ ಸಿಡಿಸಿ ಆಡುತ್ತಿದ್ದ ಜೋಸ್ ಬಟ್ಲರ್ ಗೆ ಪೆವೀಲಿಯನ್ ದಾರಿ ತೋರಿಸಿದ್ರು.
ನಂತರ ಕೊನೆಯ ಓವರಿನಲ್ಲಿ ನಾಯಕ ಸ್ಟೀವ್ ಸ್ಮಿತ್ ಅವರು 36 ಬಾಲಿಗೆ 57 ರನ್ ಸಿಡಿಸಿ ಔಟ್ ಆದರು.
ಇನ್ನು ಆರ್ ಸಿಬಿ ಪರ ಉತ್ತಮವಾಗಿ ಬೌಲ್ ಮಾಡಿದ ಕ್ರಿಸ್ ಮೋರಿಸ್ ಅವರು ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಮೂರು ವಿಕೆಟ್ ಕಿತ್ತು ಕೇವಲ 26 ರನ್ ನೀಡಿದರು.
ಇವರಿಗೆ ಉತ್ತಮವಾಗಿ ಸಾಥ್ ಕೊಟ್ಟು ಚಹಲ್ ನಾಲ್ಕು ಓವರ್ ಬೌಲ್ ಮಾಡಿ ಎರಡು ವಿಕೆಟ್ ಕಿತ್ತು 34 ರನ್ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








