IPL | ಗುಜರಾತ್ ಟೈಟಾನ್ಸ್ ಹೇಗಿದೆ ಗೊತ್ತಾ… ಓದಿ ಕ್ರೀಡಾ ಜಗತ್ತಿನ ಪ್ರಮುಖ ಸುದ್ದಿ
01. ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ತಂಡವು ತನ್ನ ಲೋಗೋವನ್ನು ಬಿಡುಗಡೆ ಮಾಡಿದೆ. ಹಾರುವ ಗಾಳಿಪಟದ ಆಕಾರದಲ್ಲಿ ಗುಜರಾತ್ ಟೈಟಾನ್ಸ್ ಲೋಗೋ ಇದೆ. ಗಾಳಿಪಟಗಳು ಗುಜರಾತಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಈ ಕಾರಣಕ್ಕೆ ಗುಜರಾತ್ ಗಾಳಿಪಟ ಆಕಾರದ ಲೋಗೋ ರೆಡಿ ಮಾಡಿದೆ.
ಹೆಚ್ಚಿನ ಮಾಹಿತಿಗಾಗಿ : IPL | ಗುಜರಾತ್ ಟೈಟಾನ್ಸ್ ಲೋಗೋ ಹೇಗಿದೆ ಗೊತ್ತಾ..?
02. ರಾಹುಲ್ ದ್ರಾವಿಡ್ ನನಗೆ ನಿವೃತ್ತಿ ಬಗ್ಗೆ ಯೋಚಿಸು ಎಂದಿದ್ದಾರೆ ಎಂಬ ವಿಕೇಟ್ ಕೀಪರ್ ವೃದ್ಧಿಮಾನ್ ಸಹಾ ಹೇಳಿಕೆಗೆ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ವೃದ್ಧಿಮಾನ್ ಸಹಾ ಮಾತುಗಳು ನನಗೆ ನೋವುಂಟು ಮಾಡಿಲ್ಲ. ಸಹಾ ನನಗೆ ಇನ್ನೂ ಗೌರವವಿದೆ ಅಂತಾ ಟೀಂ ಇಂಡಿಯಾದ ಹೆಡ್ ಕೋಚ್ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :Rahul Dravid | ಸಹಾ ಆರೋಪಕ್ಕೆ ದ್ರಾವಿಡ್ ಹೇಳಿದ್ದೇನು..?
03. ವಿಂಡೀಸ್ ವಿರುದ್ಧದ ಮೂರು ಮ್ಯಾಚ್ ಗಳ ಟಿ 20 ಸರಣಿಯನ್ನ ಭಾರತ ಕ್ರಿಕೆಟ್ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ, ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. T20 ಕ್ರಿಕೆಟ್ ನಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಸರಣಿಗಳನ್ನು ವೈಟ್ವಾಶ್ ಮಾಡಿದ ಭಾರತೀಯ ನಾಯಕನಾಗಿ ಹಿಟ್ಮ್ಯಾನ್ ಇತಿಹಾಸ ಬರೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Rohit Sharma | ವಿರಾಟ್ ಕೊಹ್ಲಿಯನ್ನ ಮೀರಿಸಿದ ರೋಹಿತ್
04. ಬಹಳ ದಿನಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದ ಜ್ಯೂನಿಯರ್ ವಾಲ್ ಖ್ಯಾತಿ ಚೇತೇಶ್ವರ್ ಪೂಜಾರಾ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಆದ್ರೆ ರಣಜಿ ಟ್ರೋಫಿ ಅಂಗವಾರಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಪೂಜಾರಾ ಧನಾಧನ್ ಇನ್ನಿಂಗ್ಸ್ ಆಡಿದ್ದಾರೆ. ತಮ್ಮ ಸಹಜ ಶೈಲಿಗೆ ವಿರುದ್ಧವಾಗಿ ಬ್ಯಾಟ್ ಬೀಸಿದ ಚೇತೇಶ್ವರ್ ಪೂಜಾರಾ, 109.64ರ ಸರಾಸರಿಯಲ್ಲಿ ಅಬ್ಬರಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : Chetheshwar pujara | ಟೆಸ್ಟ್ ನಲ್ಲಿ 100ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ಪೂಜಾರ
05. ಪ್ರೊ ಕಬಡ್ಡಿ ಲೀಗ್ ಅಂತಿಮ ಹಂತ ತಲುಪಿದೆ. ಇಂದು ಎರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಜೊತೆ ಪುಣೇರಿ ಪಲ್ಟನ್ ಸೆಣಸಾಡಲಿವೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಗುಜರಾತ್ ಜೈಂಟ್ಸ್ ಎದುರಿಸಲಿದೆ.
ಹೆಚ್ಚಿನ ಮಾಹಿತಿಗಾಗಿ : Pro kabaddi | ಬೆಂಗಳೂರು ಬುಲ್ಸ್ ಗೆ ಕೊನೆ ಅವಕಾಶ
ipl-rohit-sharma gujarat virat kohli rahul









