IPL | ಕಪ್ ಗೆದ್ದಿಲ್ಲ.. ಆದ್ರೆ ದಾಖಲೆಗಳ ಕಿಂಗ್ RCB
ರಾಯಲ್ ಚಾಲೆಂರ್ಸ್ ಬೆಂಗಳೂರು…!!! ಇಂಡಿಯನ್ ಪ್ರಿಮಿಯರ್ ಲೀಗ್ ನ ಸೂಪರ್ ಸ್ಟಾರ್ ರಜಿನಿ ಕಾಂತ್..!! ಐಪಿಎಲ್ ನ ಎವರ್ ಗ್ರೀನ್ ತಂಡ..! ಸೋಲು ಗೆಲುವಿನ ಲೆಕ್ಕಾಚಾರಗಳನ್ನ ಪಕ್ಕಕ್ಕೆ ಇಟ್ರೆ ಆರ್ ಸಿಬಿ ವಿಶ್ವ ಕ್ರಿಕೆಟ್ ಲೀಗ್ ಗಳ ಮದಗಜ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ..!
ವಿಶ್ವ ಕ್ರಿಕೆಟ್ ನ ಬಲಿಷ್ಠ ಬೇಟೆಗಾರರಿಂದಲೇ ರೂಪುಗೊಂಡಿರುವ ಆರ್ ಸಿಬಿ ಮೈದಾನದಲ್ಲಿ ರಣಬೇಟೆಗಾರನಂತೆ ಎದುರಾಳಿಗಳ ಮೇಲೆ ದಂಡಯಾತ್ರೆ ಮಾಡುತ್ತದೆ. ಇದೇ ಕಾರಣಕ್ಕೆ ರಾಯಲ್ ಚಾಲೆಂರ್ಸ್ ಬೆಂಗಳೂರು ಐಪಿಎಲ್ನ ಅಭಿಮಾನಿಗಳನ್ನ ರಂಜಿಸುವ ತಂಡಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
ಹೌದು..!! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಚಾಂಪಿಯನ್ ಆಗಿಲ್ಲ. ಆದ್ರೆ ದಾಖಲೆಗಳ ವಿಷಯದಲ್ಲಿ ಬೆಂಗಳೂರು ತಂಡ ಅಗ್ರಸ್ಥಾನದಲ್ಲಿರುತ್ತದೆ. ಹಾಗೆಯೇ ಕೆಲವೊಂದು ಕಳಪೆ ದಾಖಲೆಗಳಲ್ಲೂ ಕೂಡ ಆರ್ಸಿಬಿ ಅಗ್ರ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 14 ವರ್ಷಗಳಿಂದ ಟೈಟಲ್ ಗೆಲ್ಲುವ ಕನಸಿನೊಂದಿಗೆ ಟೂರ್ನಿ ಆರಂಭಿಸುತ್ತೆ. ಅಭಿಮಾನಿಗಳು ಈ ಸಲ ಕಪ್ ನಮ್ದೆ ಅಂತಾ ತಂಡಕ್ಕೆ ಆನೆ ಬಲವನ್ನ ತುಂಬುತ್ತಾರೆ. ಅದರಂತೆ ಆರ್ ಸಿಬಿ ಕೂಡ ಮದವೇರಿದ ಗೂಳಿಯಂತೆ ಎದುರಾಳಿಗಳ ಸವಾರಿ ಮಾಡುತ್ತದೆ. ಆದ್ರೆ ನಿರ್ಣಾಯಕ ಹಂತಕ್ಕೆ ಬಂದ ಕೂಡಲೇ ಎಲ್ಲವೂ ಉಲ್ಟಾಪಲ್ಟಾ ಆಗಿಬಿಡುತ್ತೆ. ಗೂಳಿಯಂತೆ ಅಬ್ಬರಿಸಿದ್ದ ತಂಡವೇ ಅತ್ಯಂತ ಹೀನಾಯವಾಗಿ ಸೋಲುಂಡುತ್ತೆ.
ಹೀಗಿದ್ದರೂ ಆರ್ಸಿಬಿ ಕಳೆದ 14 ಆವೃತ್ತಿಗಳಲ್ಲಿ ಸಾಕಷ್ಟು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡು ದಾಖಲೆಗಳ ಬಾಸ್ ಎನಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 14 ಸೀಸನ್ ಗಳಲ್ಲಿ 20 ಬಾರಿ 200ರ ಗಡಿ ದಾಟಿದೆ. ಆ ಮೂಲಕ ಇಂಡಿಯಲ್ ಪ್ರಿಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ಬಾರಿ 200ರ ಗಡಿ ದಾಟಿದ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಲ್ಲದೇ 263 ರನ್ಗಳಿಸುವ ಮೂಲಕ ಗರಿಷ್ಠ ಮೊತ್ತದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಇನ್ನು ಈ ಪಟ್ಟಿಯಲ್ಲಿ ಆರ್ ಸಿಬಿ ಮೊದಲ ಸ್ಥಾನದಲ್ಲಿದ್ದರೇ ಸಿಎಸ್ಕೆ 19 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದೆ. ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ 16 ಬಾರಿ, ಪಂಜಾಬ್ ಕಿಂಗ್ಸ್ 15 ಬಾರಿ, ಕೋಲ್ಕತ್ತಾ ನೈಟ್ ರೈಡರ್ಸ್ – 13 ಬಾರಿ, ಸನ್ರೈಸರ್ಸ್ ಹೈದರಾಬಾದ್ – 12 ಬಾರಿ, ರಾಜಸ್ಥಾನ್ ರಾಯಲ್ಸ್-11 ಬಾರಿ, ಡೆಲ್ಲಿ ಕ್ಯಾಪಿಟಲ್ಸ್-07 ಬಾರಿ 200ರ ಗಡಿ ದಾಟಿವೆ.
ಅತಿ ಹೆಚ್ಚು ಬಾರಿ 200 ರನ್ಗಳಿಸಿದ ಐಪಿಎಲ್ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು – 20
ಚೆನ್ನೈ ಸೂಪರ್ ಕಿಂಗ್ಸ್ -19
ಮುಂಬೈ ಇಂಡಿಯನ್ಸ್-16
ಪಂಜಾಬ್ ಕಿಂಗ್ಸ್ – 15
ಕೋಲ್ಕತ್ತಾ ನೈಟ್ ರೈಡರ್ಸ್ – 13
ಸನ್ರೈಸರ್ಸ್ ಹೈದರಾಬಾದ್ – 12
ರಾಜಸ್ಥಾನ್ ರಾಯಲ್ಸ್-11
ಡೆಲ್ಲಿ ಕ್ಯಾಪಿಟಲ್ಸ್-07
ಇದಲ್ಲದೇ ಅತಿ ಹೆಚ್ಚು ಬಾರಿ 200 ರನ್ ಬಿಟ್ಟುಕೊಟ್ಟಿರುವ ತಂಡಗಳ ಪಟ್ಟಿಯಲ್ಲಿ ಪಂಜಾಬ್ 21 ಬಾರಿ 200 ರನ್ ಗಳನ್ನು ಬಿಟ್ಟುಕೊಟ್ಟು ಮೊದಲ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು-17, ಡೆಲ್ಲಿ ಕ್ಯಾಪಿಟಲ್ಸ್-14, ಚೆನ್ನೈ ಸೂಪರ್ ಕಿಂಗ್ಸ್-14, ರಾಜಸ್ಥಾನ್ ರಾಯಲ್ಸ್-12, ಕೋಲ್ಕತ್ತಾ ನೈಟ್ ರೈಡರ್ಸ್-12 , ಮುಂಬೈ ಇಂಡಿಯನ್ಸ್-09, ಸನ್ರೈಸರ್ಸ್ ಹೈದರಾಬಾದ್-09 ಬಾರಿ ಎದುರಾಳಿಗಳಿಗೆ 200 ರನ್ ಬಿಟ್ಟುಕೊಟ್ಟಿದೆ.









