RCBಗೆ ಡೆತ್ ಬೌಲಿಂಗ್ನಲ್ಲಿ ಸಿಕ್ತಿದೆ ಕಿಕ್..! IPL saaksha tv
ಕಳೆದ 13 ಸೀಸನ್ಗಳಲ್ಲಿ ಆರ್ಸಿಬಿಗೆ ಡೆತ್ ಓವರುಗಳೇ ಕಾಟ ಕೊಡುತ್ತಿದ್ದವು. ಗೆಲ್ಲುವ ಪಂದ್ಯಗಳನ್ನು ಡತ್ ಓವರ್ಗಳಲ್ಲೇ ಆರ್ಸಿಬಿ ಕಳೆದುಕೊಳ್ಳುತ್ತಿತ್ತು.
ಆದರೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿಯೇ ಡೆತ್ ಓವರ್ ಗಳಲ್ಲಿ ಕಾಟ ಕೊಡುತ್ತಿದೆ. ಎದುರಾಳಿಗಳ ಕೈಯಿಂದ ಪಂದ್ಯವನ್ನು ಕಿತ್ತುಕೊಂಡು ಗೆಲುವಿನ ಸಂಭ್ರಮ ಆಚರಿಸುತ್ತಿದೆ. ಇದಕ್ಕೆ ಕಾರಣ ಹರ್ಷಲ್ ಪಟೇಲ್. ಆರ್ಸಿಬಿ ಪಾಲಿಗೆ ಹರ್ಷಲ್ ಪಟೇಲ್, “ಪರ್ಪಲ್” ಪಟೇಲ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲಿಂಗ್ ಅಸ್ತ್ರ ಹರ್ಷಲ್ ಪಟೇಲ್ ಐಪಿಎಲ್ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಈ ವಿಶೇಷ ಸಾಧನೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಯಾವೊಬ್ಬ ಬೌಲರ್ ಮಾಡಿರದ ವಿಶೇಷ ಸಾಧನೆ ಮಾಡಿದ್ದಾರೆ.
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆಯುವ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಪಟೇಲ್ 26 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಭಾರತ ತಂಡದಲ್ಲಿ ಆಡದೆ ಐಪಿಎಲ್ನಲ್ಲಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಆಗಿ ಗಮನ ಸೆಳೆದಿದ್ದಾರೆ.
ಇದಕ್ಕೂ ಮುನ್ನ 2015ರಲ್ಲಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 23 ವಿಕೆಟ್ಗಳನ್ನು ಪಡೆದಿದ್ದು ಆರ್ಸಿಬಿ ಪರ ಶ್ರೇಷ್ಠ ಸಾಧನೆಯ ದಾಖಲೆ ಆಗಿತ್ತು. ಈಗ ಈ ದಾಖಲೆ ಹರ್ಷಲ್ ಪಾಲಾಗಿದೆ.
ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಡ್ವೇನ್ ಬ್ರಾವೋ ಹೆಸರಲ್ಲಿದೆ.
2013ರ ಆವೃತ್ತಿಯಲ್ಲಿ ಬ್ರಾವೋ ಒಟ್ಟು 32 ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದ್ದರು. ಈಗ ಈ ದಾಖಲೆ ಮುರಿಯಲು ಹರ್ಷಲ್ಗೆ ಕೇವಲ 7 ವಿಕೆಟ್ಗಳ ಅಗತ್ಯವಿದೆ.
ಲೀಗ್ನಲ್ಲಿ ಇನ್ನು ಮೂರು ಪಂದ್ಯ ಬಳಿಕ ನಾಕ್ಔಟ್ ಪಂದ್ಯಗಳಲ್ಲಿ ಹರ್ಷಲ್ಗೆ ಈ ದಾಖಲೆ ಮುರಿಯುವ ಅತ್ಯುತ್ತಮ ಅವಕಾಶ ಸಿಕ್ಕಿದೆ.









