IPL | ನಾವು ಅದ್ಭುತಗಳನ್ನ ಸೃಷ್ಟಿಸುತ್ತೇವೆ : ಧವನ್
ಟೀಂ ಇಂಡಿಯಾದ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಐಪಿಎಲ್-2022 ಮೆಗಾ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿ ಧವನ್ ಅವರನ್ನು 8.25 ಕೋಟಿ ರೂ.ಗೆ ಖರೀದಿಸಿದೆ.
ಹೀಗಾಗಿ ಧವನ್ ಪಂಜಾಬ್ ಕಿಂಗ್ಸ್ ನಾಯಕರಾಗುತ್ತಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು. ಆದಾಗ್ಯೂ, ಯುವ ಆಟಗಾರ ಮಯಾಂಕ್ ಅಗರ್ವಾಲ್ ಪಂಜಾಬ್ ಕಿಂಗ್ಸ್ ನಾಯಕರಾಗಿ ಆಯ್ಕೆಯಾದರು.
ಈ ಬಗ್ಗೆ ಮಾತನಾಡಿರುವ ಧವನ್, ಯಂಗ್ ಎಂಡ್ ಡೈನಾಮಿಕ್ ನಾಯಕ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಆಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
“ಮಯಾಂಕ್ ಅವರ ನಾಯಕತ್ವದಲ್ಲಿ ಆಡಲು ನಾನು ಎದುರು ನೋಡುತ್ತಿದ್ದೇನೆ. ಅವರ ನಾಯಕತ್ವದಲ್ಲಿ ಆಡುವುದು ನನಗೆ ಉಪಯುಕ್ತವಾಗಿದೆ. ನಮ್ಮಲ್ಲಿ ಬಲಿಷ್ಠ ತಂಡವಿದೆ.
ನಮ್ಮ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಯುವಕರಿದ್ದಾರೆ. ಈ ಬಾರಿ ನಾವು ಅದ್ಭುತಗಳನ್ನು ಸೃಷ್ಟಿಸುತ್ತೇವೆ. ಅದೇ ರೀತಿ ಮಯಾಂಕ್ ಜೊತೆ ಓಪನಿಂಗ್ ಮಾಡೊದಕ್ಕೆ ನನಗೆ ಖುಷಿ ಇದೆ.
ಓಪನಿಂಗ್ ದೊಡ್ಡ ಜವಾಬ್ದಾರಿಯಾಗಿದೆ, ಅದನ್ನು ಸ್ವೀಕರಿಸಲು ನಾನು ಸಿದ್ಧ ಎಂದಿದ್ದಾರೆ ಧವನ್.
ನಾನು ಪ್ರಸ್ತುತ NCA ನಲ್ಲಿದ್ದೇನೆ. ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ನಾನು ಇಲ್ಲಿ ನೆಟ್‌ನಲ್ಲಿ ಕಷ್ಟಪಟ್ಟು ಪ್ರಾಕ್ಟೀಸ್ ಮಾಡುತ್ತಿದ್ದೇನೆ.
ನಾನು ಇನ್ನು ಮುಂದೆ ನನ್ನ ಆಟದ ಮೇಲೆ ಮಾತ್ರ ಗಮನಹರಿಸುತ್ತೇನೆ. ಟೀಮಿಂಡಿಯಾದಿಂದ ಕರೆ ಬಂದ ತಕ್ಷಣ ತಂಡ ಸೇರಲು ಸಿದ್ಧನಿದ್ದೇನೆ. ಅದನ್ನೇ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಶಿಖರ್. ipl-shikhar-dhawan reaction about mayank captaincy









