ಆಗಸ್ಟ್ 20ರಂದು ಯುಎಇಗೆ ಪ್ರಯಣ ಬೆಳೆಸಲಿರುವ ಐಪಿಎಲ್ ಫ್ರಾಂಚೈಸಿಗಳು..?
ಬಹುನಿರೀಕ್ಷಿತ ಐಪಿಎಲ್ ಟೂರ್ನಿಗೆ ಮುಹೂರ್ತ ಬಹುತೇಕ ಫಿಕ್ಸ್ ಆಗಿದೆ. ಮುಂದಿನ ಹತ್ತು ದಿನದೊಳಗೆ ಐಪಿಎಲ್ ಟೂರ್ನಿಯ ಅಂತಿಮ ನಿರ್ಧಾರ ಹೊರ ಬೀಳಲಿದೆ. ಈ ನಡುವೆ ಬಿಸಿಸಿಐ ಕೇಂದ್ರ ಸರ್ಕಾರದ ಸಮ್ಮತಿಗಾಗಿ ಕಾಯುತ್ತಿದೆ.
ಈ ಹಿಂದೆ ಐಪಿಎಲ್ ಸೆಪ್ಟಂಬರ್ 26ರಿಂದ ನವೆಂಬರ್ 8ರವರೆಗೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಬಿಸಿಸಿಐ ಮೂಲಗಳ ಪ್ರಕಾರ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ. ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ. ಆಗಸ್ಟ್ 20ರಂದು ಐಪಿಎಲ್ ಫ್ರಾಂಚೈಸಿಗಳು ಯುಎಇಗೆ ಪ್ರಯಾಣ ಬೆಳೆಸಲಿವೆ.
ಈಗಾಗಲೇ ಐಸಿಸಿಯು ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದೆ. ಹೀಗಾಗಿ ಬಿಸಿಸಿಐಗೆ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಅವಕಾಶ ಸಿಕ್ಕಿದೆ. ಅದು ಅಲ್ಲದೆ ಐಪಿಎಲ್ ಈ ವರ್ಷದ ಪ್ರತಿಷ್ಠಿತ ಟೂರ್ನಿಯಾಗಿದೆ. ಹೀಗಾಗಿ ದೇಶಿ ಮತ್ತು ವಿದೇಶಿ ಆಟಗಾರರು ಕಾತರದಿಂದ ಐಪಿಎಲ್ ಟೂರ್ನಿಯನ್ನು ಎದುರು ನೋಡುತ್ತಿದ್ದಾರೆ.
ಇನ್ನು ಬ್ರಾಡ್ ಕಾಸ್ಟರ್ ಐಪಿಎಲ್ ಟೂರ್ನಿಯನ್ನು ನವೆಂಬರ್ 14ರ ತನಕ ವಿಸ್ತರಿಸಬೇಕು ಎಂದು ಬಿಸಿಸಿಐನಲ್ಲಿ ಮನವಿ ಮಾಡಿಕೊಂಡಿತ್ತು. ಆದ್ರೆ ಬಿಸಿಸಿಐ ವಿಸ್ತರಿಸುವ ಯಾವುದೇ ಸಾಧ್ಯತೆಗಳು ಇಲ್ಲ. ಐಪಿಎಲ್ ಮುಗಿದ ತಕ್ಷಣ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಆಟಗಾರರು 14 ದಿನಗಳ ಕಾಲ ಕ್ವಾರಂಟೈನ್
ನಲ್ಲಿರಬೇಕಾಗುತ್ತದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಹೇಳಿದೆ. ಹೀಗಾಗಿ ಟೀಮ್ ಇಂಡಿಯಾಗೆ ತೊಂದರೆಯಾಗುತ್ತದೆ. ಆದ್ರಿಂದ ಐಪಿಎಲ್ ಟೂರ್ನಿಯನ್ನು ವಿಸ್ತರಿಸುವ ಯಾವುದು ಲೆಕ್ಕಾಚಾರಗಳು ಬಿಸಿಸಿಐ ಮುಂದಿಲ್ಲ. ಇನ್ನೊಂದೆಡೆ ಆಗಸ್ಟ್ 20ರಂದು ಯುಎಇಗೆ ಪ್ರಯಾಣ ಬೆಳೆಸುವುದರಿಂದ ಐಪಿಎಲ್ ತಂಡಗಳಿಗೆ ನಾಲ್ಕು ವಾರಗಳ ಅಭ್ಯಾಸ ಶಿಬಿರವೂ ನಡೆಯುತ್ತದೆ.








