IPL Tournament 2023 -ಬಹುನಿರೀಕ್ಷಿತ 2023ರ ಐಪಿಎಲ್ ಟೂರ್ನಿಗೆ ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಚಾಲನೆ ನೀಡಲಾಯಿತು .ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ಪಂದ್ಯಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು .
ಸಮಾರಂಭಕ್ಕೆ ಮೆರಗನ್ನು ಹೆಚ್ಚಿಸಲು ಆಗಮಿಸಿದ್ದ ಬಾಲಿವುಡ್ ಗಾಯಕ ಅರ್ಜಿತ್ ಸಿಂಗ್ ಹಾಗೂ ಬಹು ಭಾಷಾ ನಟಿಯರಾದ ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದಣ್ಣ ಅವರು ನೃತ್ಯ ಅಭಿಮಾನಿಗಳನ್ನು ರಂಜಿಸಿದ್ದವು.
ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ರಥದ ಮೂಲಕ ವೇದಿಕೆಯತ್ತ ಬಂದರು. ವೇದಿಕೆ ಮೇಲೆ ಎಂಎಸ್ ಧೋನಿ ಆಗಮಿಸುತ್ತಿದ್ದಂತೆ ಪಾದವನ್ನು ಮುಟ್ಟಿ ನಮಸ್ಕರಿಸಿದ ಅರ್ಜಿತ್ ಸಿಂಗ್
ಈ ರೀತಿಯಾಗಿ ಪಾದವನ್ನು ಸ್ಪರ್ಶಿಸಿ ನಮಸ್ಕರಿಸಿದ ಬಾಲಿವುಡ್ ಗಾಯಕ ಅರ್ಜಿತ್ ಸಿಂಗ್ ಎಲ್ಲರ ಗಮನ ಸೆಳೆದರು. ಇದಿಗ ಈ ಪೋಟೊ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅರ್ಜಿತ್ ಸಿಂಗ್ ಅವರು 30 ನಿಮಿಷಗಳ ಕಾಲ ಹಿಂದಿ ಭಾಷೆಯ ಹಲವು ಹಾಡುಗಳನ್ನು ಹಾಡುವ ಮೂಲಕ 2023ರ ಐಪಿಎಲ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ವರ್ಣರಂಜಿತ ಆರಂಭ ತಂದುಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿದ ಬಳಿಕ ಅರ್ಜಿತ್ ಸಿಂಗ್, ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ ಶಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಸೇರಿದಂತೆ ಹಲವು ಗಣ್ಯರು ವೇದಿಕೆಯ ಮೇಲೆ ಆಗಮಿಸಿದರು.