IPL2022 | ವಿಜಯಾನಂದದಲ್ಲಿರುವ ಡೆಲ್ಲಿಗೆ ಬ್ಯಾಡ್ ನ್ಯೂಸ್..!!
ಇಂಡಿಯಲ್ ಪ್ರಿಮಿಯರ್ ಲೀಗ್ ಎರಡನೇ ಪಂದ್ಯದಲ್ಲಿ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ.
ಆ ಮೂಲಕ 15 ಸೀಸನ್ ಐಪಿಎಲ್ ನಲ್ಲಿ ಪಂತ್ ಸೇನೆ ಶುಭಾರಂಭ ಮಾಡಿದೆ. ರೋಹಿತ್ ಶರ್ಮಾ ನೇತೃತ್ವದ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿರೋದು ಡೆಲ್ಲಿ ಬಾಯ್ಸ್ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರ ವಿಜಯಾನಂದದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಆಘಾತ ಎದುರಾಗಿದೆ.
ಡೆಲ್ಲಿ ತಂಡದ ಪರ ಆಡಬೇಕಿದ್ದ ಮಿಚೆಲ್ ಮಾರ್ಷ್ ಇಂಜೂರಿಯಾಗಿದ್ದು, ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದು ಡೆಲ್ಲಿ ಕ್ಯಾಂಪ್ ನ ಖುಷಿಯನ್ನ ಹಾಳು ಮಾಡಿದೆ.
ಮಿಚೆಲ್ ಮಾರ್ಶ್ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದ್ದು, ಪ್ರಾಕ್ಟೀಸ್ ವೇಳೆ ಗಾಯಗೊಂಡಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾದ ನಾಯಕ ಆರೋನ್ ಪಿಂಚ್ ಬಹಿರಂಗ ಪಡಿಸಿದ್ದಾರೆ.
ಮಿಚೆಲ್ ಮಾರ್ಷ್ ಪ್ರಾಕ್ಟೀಸ್ ಮಾಡುವ ವೇಳೆಯಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಪಾಕಿಸ್ತಾನ ವಿರುದ್ಧದ ಸಂಪೂರ್ಣ ಸರಣಿಯಿಂದ ದೂರ ಇರಲಿದ್ದಾರೆ ಎಂದಿದ್ದಾರೆ.
ಮಾರ್ಷ್ ಗಾಯಗೊಂಡಿರುವುದರಿಂದ ಈ ಬಾರಿಯ ಇಂಡಿಯಲ್ ಪ್ರಿಮಿಯರ್ ಲೀಗ್ ನಿಂದಲೂ ದೂರ ಇರುವ ಸಾಧ್ಯತೆಗಳಿವೆ.
ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ತಲೆ ಬಿಸಿ ಹೆಚ್ಚಿಸಿದೆ. 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟನ್ ತಂಡ 6.5 ಕೋಟಿ ರೂ.ಗೆ ಮಾರ್ಷ್ ಅವರನ್ನು ಖರೀದಿಸಿತ್ತು.
ಅಂದಹಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ದಕ್ಷಿಣ ಆಫ್ರಿಕಾದ ಬೌಲರ್ ಅನ್ರಿಚ್ ಅವರ ಸೇವೆಯನ್ನು ಕಳೆದುಕೊಂಡಿದೆ. ಇದೀಗ ಆಲ್ ರೌಂಡರ್ ಮಿಚೆಲ್ ಮಾರ್ಷ್ ಸೇವೆಯನ್ನೂ ಕಳೆದುಕೊಳ್ಳುವ ಆತಂಕದಲ್ಲಿದೆ.
ಒಂದು ವೇಳೆ ಮಿಚೆಲ್ ಅಲಭ್ಯರಾದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹರಾಜಿನಲ್ಲಿ ಅನ್ ಸೋಲ್ಡ್ ಆದ ಆಲ್ ರೌಂಡರ್ ಗಳತ್ತ ಮುಖ ಮಾಡಬೇಕಿದೆ.
ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮೊಸಿಸ್ ಹೆನ್ರಿಕ್ಸ್, ಶ್ರೀಲಂಕಾ ತಂಡದ ದಾಸುನ್ ಶನಕ, ಸೌತ್ ಆಫ್ರಿಕಾ ತಂಡದ ಡೇವಿಡ್ ವೈಸ್, ಬೆನ್ ಕಟ್ಟಿಂಗ್, ಶ್ರೀಲಂಕಾ ತಂಡದ ತಿಸಾರ ಪೆರೇರಾ ಇದ್ದಾರೆ.
ಈ ಆಟಗಾರರಲ್ಲಿ ಒಬ್ಬರ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಪ್ಪಂದ ಮಾಡಿಕೊಳ್ಳಬೇಕಿದೆ. ಇನ್ನು ಪಂತ್ ಸೇನೆ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 2 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ipl2022-mitchell-marsh-likely-miss-ipl-2022