ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ – ಇಸ್ರೇಲ್ ರಕ್ಷಕ ‘ ಐರನ್ ಡೋಮ್’
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ವಾಯುದಾಳಿಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಸಹ ಹಮಾಸ್ ಬಂಡುಕೋರರ ನೆಲೆಗಳನ್ನು ಗುತಿಯಾಗಿರಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಈ ನಡುವೆ ಇಸ್ರೇಲ್ ನ ಐರನ್ ಡೋಮ್ ಕಳೆದ ಕೆಲದಿನಗಳಿಂದ ಸುದ್ದಿಯಲ್ಲಿದೆ. ರಾಕೆಟ್ ದಾಳಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಈ ಐರನ್ ಡೋಮ್ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. 
ಇಸ್ರೇಲ್ ನ್ನು ಗುರಿಯಾಗಿರಿಸಿಕೊಂಡು ಬರುವ ಯಾವುದೇ ರಾಕೆಟ್ ಅಥವಾ ಕ್ಷಿಪಣಿಗಳನ್ನು ಪತ್ತೆಹಚ್ಚಿ ಅವುಗಳನ್ನು ತಡೆಯುವ ಸಾಮರ್ಥ್ಯವನ್ನು ಐರನ್ ಡೋಮ್ ಹೊಂದಿದೆ. ೨೦೧೧ ರಲ್ಲಿ ಐರನ್ ಡೋಮ್‌ನ್ನು ನಿರ್ಮಿಸಲಾಯಿತು. ಆದರೆ ಇದಕ್ಕೂ ಮುನ್ನ ೨೦೦೫ ರಲ್ಲಿ ನಡೆದ ಲೆಬನಾನ್ ದಾಳಿಯ ಮರುವರ್ಷವೇ ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಹೊಸ ವಾಯು ರಕ್ಷಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಘೋಷಿಸಿಬಿಟ್ಟಿತ್ತು. ಐರನ್ ಡೋಮ್ ನಿಯೋಜಿಸಿದ ಪ್ರದೇಶದಲ್ಲಿ ಅನೇಕ ರೀತಿಯ ವಾಯು ದಾಳಿಗಳನ್ನು ತಡೆಯುತ್ತದೆ. ಟ್ರ್ಯಾಕಿಂಗ್ ರೇಡಾರ್, ಯುದ್ಧ ನಿರ್ವಹಣೆ, ಶಸ್ತ್ರಾಸ್ತ್ರ ನಿರ್ವಹಣಾ ವ್ಯವಸ್ಥೆ ಮತ್ತು ಕ್ಷಿಪಣಿ ಫೈರಿಂಗ್ ಘಟಕವನ್ನು ಹೊಂದಿದೆ.
ಗುರಿಯು ೧೦ ಕಿಮೀ ಒಳಗೆ ಹಾದುಹೋಗುವಾಗ ಇದು ಕ್ಷಿಪಣಿಯನ್ನು ಸಿಡಿದ ಬಾಂಬ್ ಚೂರುಗಳೊಂದಿಗೆ ಸಕ್ರಿಯಗೊಳಿಸಿ ಗುರಿಯನ್ನು ನಾಶ ಮಾಡುತ್ತದೆ. ಈ ಐರನ್ ಡೋಮ್ ನ ನಿರ್ವಹಣೆಗೆಂದೇ ರಕ್ಷಣಾ ಪರಿಣಿತರು ಮತ್ತು ಸೈನಿಕರ ತಂಡವಿದೆ. ಐರನ್ ಡೋಮ್ ಬಿಸಿಲು, ಮಳೆ, ಚಳಿ ಲೆಕ್ಕಿಸದೆ ವರ್ಷದ ಎಲ್ಲ ಕಾಲದಲ್ಲಿಯೂ ನಿಖರವಾಗಿ ಕಾರ್ಯ ನಿರ್ವಹಿಸುತ್ತದೆ. ಅಡ್ವಾನ್ಸ್ಡ್ ತಂತ್ರಜ್ಞಾನ ಕೂಡಿದ ಈ ಡೋಮ್ ನ್ನು ಚಲಾವಣೆ ಸಹ ಮಾಡಬಹುದು. ಭೂಮಿ ಸಾಗರ ಹೀಗೆ ಎಲ್ಲೆಂದರಲ್ಲಿ ಈ ಡೋಮ್ ನ್ನು ಸಾಗಿಸಬಹುದು. ಇಸ್ರೇಲಿಗರನ್ನು ರಕ್ಷಿಸಲುಈ ಐರನ್ ಡೋಮ್ ಸದಾ ಸನ್ನದ್ಧವಾಗಿರುತ್ತದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








