ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಇಂದು ಸಂಜೆ 5 ಗಂಟೆ ಒಳಗಾಗಿ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಕಮಲ್‌ನಾಥ್ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಮಲ್‌ನಾಥ್ ಅಪರಾಹ್ನ 2 ಗಂಟೆಗೆ ವಿಶ್ವಾಸಮತ ಯಾಚಿಸಲು ನಿರ್ಧರಿಸಿದ್ದಾರೆ. ಇದೆ ಹೊತ್ತಿನಲ್ಲಿ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿಯವರು 16 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರ ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಶಾಸಕರು ಮಾರ್ಚ್ 9 ರಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರು. ಅಲ್ಲದೆ ಇಲ್ಲಿಂದಲೇ ಸ್ಪೀಕರ್ ಗೆ ರಾಜೀನಾಮೆ ಪತ್ರ ರವಾನಿಸಿದ್ದರು. ಇದೀಗ 16 ಶಾಸಕರು ಮತ್ತು 6 ಜನ ಸಚಿವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಬೆಂಬಲಿಸಿದ 22 ಶಾಸಕರ ರಾಜೀನಾಮೆ ಆಂಗೀಕಾರವಾದಂತಾಗಿದೆ.
ಸದನದ ಬಲಾಬಲ
22 ಶಾಸಕರ ರಾಜೀನಾಮೆ ಅಂಗೀಕಾರವಾದ ಬಳಿಕ ಸದನದ ಬಲ 206ಕ್ಕೆ ಕುಸಿದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ 92 ಶಾಸಕರನ್ನು ಹೊಂದಿದೆ. ಎಸ್ ಪಿ 2, ಬಿ.ಎಸ್.ಪಿ 1 ಪಕ್ಷತೇರ 4 ಜನ ಶಾಸಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಸರಳ ಬಹುಮತಕ್ಕೆ 104 ಶಾಸಕರ ಅಗತ್ಯವಿದೆ. ಐದು ಶಾಸಕರ ಕೊರತೆ ಆಡಳಿತ ಪಕ್ಷಕ್ಕೆ ಎದುರಾಗಿದೆ. ಇದರಿಂದ ಕಮಲ್‌ನಾಥ್ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ. ಮಧ್ಯಪ್ರದೇಶದ ಬಿಜೆಪಿ . 107 ಶಾಸಕರ ಬಲ ಹೊಂದಿದೆ. ಬರಳ ಬಹುಮತಕ್ಕಿಂತ ಮೂರು ಶಾಸಕ ಬಲ ಹೆಚ್ಚು ಬಿಜೆಪಿ ಹೊಂದಿದೆ. ಇದರಿಂದ ಮಧ್ಯಪ್ರದೇಶದಲ್ಲಿ ಕೇಸರಿ ಭಾವುಟ ಹಾರಿಸಲು ಬಿಜೆಪಿ ಸಜ್ಜಾಗಿದೆ.









