ಒಂದೆಡೆ ಕೊರೊನಾ ಹಾªಳಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದ್ರೆ ಮತ್ತೊಂದೆಡೆ ಸರ್ಕಾರದÀ ಆದೇಶವನ್ನ ಗಾಳಿಗೆ ತೂರಿರುವ ಜನರು ಬೇಕಾಬಿಟ್ಟಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಲಾಕ್ ಡೌನ್ ಗೆ ಕ್ಯಾರೇ ಅನ್ನದೇ ವಾಹನ ಸವಾರರು ಕೆ ಆರ್ ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ದೃಷ್ಯ ಕಂಡುಬAದಿದೆ. ಒಂದು ಕಡೆ ಪೊಲೀಸರು ವಾಹನ ಸವಾರರ ಬೇಜವಬಬ್ದಾರಿ ತನಕ್ಕೆ ಹೈರಾಣಾಗಿದ್ರೆ, ಮತ್ತೊಂದೆಡೆ ಸವಾರರು ಕುಂಟು ನೆಪಗಳನ್ನ ಹೇಳಿಕೊಂಡು ಸುಖಾಸುಮ್ಮನೆ ಓಡಾಟ ನೆಡಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಸರ್ಕಾರ ಕೊರೊನಾ ನಿರ್ಮೂಲನೆಗೆ ಎಷ್ಟೇ ಕಠಿಣ ಕ್ರಮಗಳನ್ನ ಕೈಗೊಂಡ್ರೂ ಜನ ಅದಕ್ಕೆ ತಲೆಕೆಡಿಸಿಕೊಳ್ಳದೇ ಹೀಗೆ ರಸ್ತೆಯಲ್ಲಿ ಓಡಾಟ ನಡೆಸ್‌ತಿದ್ದು, ಇವರನ್ನ ತಡೆಯುವುದೇ ಪೊಲೀಸರಿಗೆ ಸದ್ಯ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಪ್ರತಿ ದಿನ ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳೂ ದಾಖಲಾಗ್ತಿದ್ರು, ನಮ್ಮ ಬೆಂಗಳೂರಿಗರಿಗೆ ಬುದ್ದಿ ಬಂದಿರುವಂತೆ ಕಾಣ್ತಿಲ್ಲ.








