ಪೇಪರ್ ಕಪ್ ನಲ್ಲಿ ಚಹಾ ಕುಡಿಯುವುದು ಸುರಕ್ಷಿತವಾಗಿದೆಯೇ ? paper cup sip tea
ಕೋಲ್ಕತಾ, ನವೆಂಬರ್08: ಪೇಪರ್ ಕಪ್ ನಲ್ಲಿ ಚಹಾ ಕುಡಿಯುವುದು ಸುರಕ್ಷಿತವಾಗಿದೆಯೇ?.. ಇಲ್ಲ…
ಐಐಟಿ-ಖರಗ್‌ಪುರದ ಸಂಶೋಧಕರ ಗುಂಪು ನಡೆಸಿದ ಅಧ್ಯಯನವೊಂದು ಪೇಪರ್ ಕಪ್ ನಲ್ಲಿ ಚಹಾ ಕುಡಿಯುವುದು ಹಾನಿಕಾರಕ ಎಂದು ಹೇಳಿದೆ. paper cup sip tea
ಸಿವಿಲ್ ಎಂಜಿನಿಯರಿಂಗ್ ಶಿಕ್ಷಕಿ ಸುಧಾ ಗೋಯೆಲ್, ಪರಿಸರ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಸಂಶೋಧನಾ ವಿದ್ವಾಂಸರಾದ ವೇದ ಪ್ರಕಾಶ್ ರಂಜನ್, ಮತ್ತು ಅನುಜಾ ಜೋಸೆಫ್ ಅವರು ಇತ್ತೀಚೆಗೆ ನಡೆಸಿದ ಅಧ್ಯಯನವು ಈ ಕಪ್‌ಗಳಲ್ಲಿನ ಸೂಕ್ಷ್ಮ ಪ್ಲಾಸ್ಟಿಕ್ ಪದರವು 15 ನಿಮಿಷಗಳೊಳಗೆ ಬಿಸಿ ನೀರು ಅಥವಾ ಇತರ ಪಾನೀಯಗಳಿಗೆ ಪ್ರತಿಕ್ರಿಯೆಯಾಗಿ ಕರಗುತ್ತದೆ ಎಂದು ಕಂಡು ಹಿಡಿದಿದ್ದಾರೆ.
ಪೇಪರ್ ಕಪ್‌ನಲ್ಲಿ ಹಾಕಿದ ಚಹಾ ಅಥವಾ ಕಾಫಿಯ ಶಾಖಕ್ಕೆ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬಿಡುಗಡೆಯಾಗುತ್ತವೆ ಎಂದು ಅವರು ಖಚಿತಪಡಿಸಿದ್ದಾರೆ.
ವಾಟ್ಸಾಪ್ ಮೂಲಕ ಹಣ ರವಾನಿಸಲು ಯಾವುದೇ ಶುಲ್ಕವಿಲ್ಲ – ಮಾರ್ಕ್ ಜುಕರ್‌ಬರ್ಗ್
ಪೇಪರ್ ಕಪ್‌ಗಳನ್ನು ಸಾಮಾನ್ಯವಾಗಿ ಹೈಡ್ರೋಫೋಬಿಕ್ ಫಿಲ್ಮ್ ನ ತೆಳುವಾದ ಪದರದಿಂದ ಮುಚ್ಚಲಾಗುತ್ತದೆ. ಇದನ್ನು ಹೆಚ್ಚಾಗಿ ಪ್ಲಾಸ್ಟಿಕ್ (ಪಾಲಿಥಿಲೀನ್) ಮತ್ತು ಕೆಲವೊಮ್ಮೆ ಸಹ-ಪಾಲಿಮರ್‌ಗಳಿಂದ ತಯಾರಿಸಲಾಗುತ್ತದೆ.
ಈ ಮೈಕ್ರೋಪ್ಲಾಸ್ಟಿಕ್ ಪದರವು ಕೇವಲ ಬಿಸಿನೀರಿನ ಶಾಖಕ್ಕೆ 15 ನಿಮಿಷಗಳಲ್ಲಿ ವಿಭಜನೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಮೈಕ್ರೋಪ್ಲಾಸ್ಟಿಕ್ ಅನಾರೋಗ್ಯಕರ ಅಯಾನುಗಳನ್ನು ಮತ್ತು ಪಲ್ಲಾಡಿಯಮ್, ಕ್ರೋಮಿಯಂ ಮತ್ತು ಕ್ಯಾಡ್ಮಿಯಂನಂತಹ ವಿಷಕಾರಿ ಹೆವಿ ಲೋಹಗಳ ವಾಹಕವಾಗಿ ಕಾರ್ಯ ನಿರ್ವಹಿಸುತ್ತದೆ.
ನಮ್ಮ ಅಧ್ಯಯನದ ಪ್ರಕಾರ, ಮೈಕ್ರಾನ್ ಗಾತ್ರದ (10µm ನಿಂದ 1,000µm) ಕಪ್, 25,000 ಮೈಕ್ರೋಪ್ಲಾಸ್ಟಿಕ್ ಕಣಗಳನ್ನು 100 ಮಿಲಿ ಬಿಸಿ ದ್ರವಕ್ಕೆ (85 ° C-90 ° C) 15 ನಿಮಿಷಗಳೊಳಗೆ ಬಿಡುಗಡೆ ಮಾಡುತ್ತದೆ. ಹೀಗಾಗಿ, ಒಬ್ಬ ಸಾಮಾನ್ಯ ವ್ಯಕ್ತಿಯು ಮೂರು ನಿಯಮಿತ ಕಪ್ ಚಹಾ ಅಥವಾ ಕಾಫಿಯನ್ನು ಪ್ರತಿದಿನ ಕುಡಿಯುವುದರಿಂದ 75,000 ಸಣ್ಣ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ನುಂಗುತ್ತಾನೆ ಎಂದು ಗೋಯೆಲ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?https://t.co/tVs0wPf1v3
— Saaksha TV (@SaakshaTv) November 7, 2020
ಎದೆಯುರಿ ನಿವಾರಣೆಗೆ 7 ನೈಸರ್ಗಿಕ ಮನೆಮದ್ದುhttps://t.co/dvehOAVu77
— Saaksha TV (@SaakshaTv) November 7, 2020