ಟೋಪಿ ಹಾಕೋ ಸ್ಕೀಂಗಳಿಗೂ, ಪಿಎಂ-ಕೇರ್ಸ್‍ಗೂ ವ್ಯತ್ಯಾಸವಿದೆಯೆ..?
ಬೆಂಗಳೂರು ; ದೇಶದಲ್ಲಿ ನಡೆಯುವ ಅನೇಕ ಟೋಪಿ ಹಾಕುವ ಸ್ಕೀಂಗಳಿಗೂ ಈ ಪಿಎಂ-ಕೇರ್ಸ್‍ಗೂ ಏನಾದರೂ ವ್ಯತ್ಯಾಸವಿದೆಯೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಪಿಎಂ ಕೇರ್ಸ್ ನಿಧಿಯು ಕೋವಿಡ್ ನಿಂದಾದ ಸಮಸ್ಯೆಗಳ ಪರಿಹಾರಕ್ಕೆ ದೇಣಿಗೆಗಳನ್ನು ಸ್ವೀಕರಿಸಲು ಸರ್ಕಾರನೇ ರಚಿಸಿದ ನಿಧಿಯಾಗಿರುವುದರಿಂದ ಅದೊಂದು ಸಾರ್ವಜನಿಕ ಘಟಕವಾಗಿದೆ.
ಅದರ ನಿಯಂತ್ರಣ, ಮಾಲೀಕತ್ವ ಕೇಂದ್ರದ ಬಳಿ ಇದೆ. ಆದ್ರೆ ಇದು ಖಾಸಗಿಯವರಿಂದ ದೇಣಿಗೆ ಸಂಗ್ರಹಿಸುತ್ತಿರುವುದರಿಂದ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪಿಎಂ-ಕೇರ್ಸ್ ಎಂಬ ನಿಧಿ ಸ್ಥಾಪಿಸಿ ಸ್ವತಃ ಕೇಂದ್ರ ಸರ್ಕಾರವೇ ಆರ್ಥಿಕ ಅಪರಾಧದಲ್ಲಿ ತೊಡಗಿದೆ. ದೇಶದಲ್ಲಿ ನಡೆಯುವ ಅನೇಕ ಟೋಪಿ ಹಾಕುವ ಸ್ಕೀಂಗಳಿಗೂ ಈ ಪಿಎಂ-ಕೇರ್ಸ್‍ಗೂ ಏನಾದರೂ ವ್ಯತ್ಯಾಸವಿದೆಯೆ..?
ಕೋವಿಡ್ ಸಂಕಷ್ಟಕಾಲದಲ್ಲಿ ಜನರಿಗೆ ನೆರವಾಗಬೇಕಾದ ಸರ್ಕಾರ,ಜನರಿಂದಲೇ ದೇಣಿಗೆ ಪಡೆದು,ಬಿಡಿಗಾಸು ಖರ್ಚು ಮಾಡದೆ ಮಾಹಿತಿ ಮುಚ್ಚಿಟ್ಟರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ..
ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಲಜ್ಜೆಗೇಡಿತನ ಪ್ರದರ್ಶಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದ್ದರೂ ಮೋದಿ ಸರ್ಕಾರದ ನಿರ್ಲಿಪ್ತತೆ ಖಂಡನೀಯ. ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸ್ಪಂದಿಸದೇ ಹೋದರೆ, ಇದು ದಪ್ಪ ಚರ್ಮದ ಸರ್ಕಾರವಲ್ಲದೆ ಮತ್ತೇನು ಎಂದು ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









