Ishan Kishan : ಅರ್ರೆ ಇಶಾನ್ ಕಿಶನ್ ಗೆ ಏನಾಯ್ತು..?
ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಒಂದು ಕುತೂಹಲಕಾರಿ ಘಟನೆ ನಡೆದಿದೆ.
ಚೆಂಡು ಕಾಣಿಸದ ಕಾರಣ ಇಶಾನ್ ಕಿಶನ್ ಕೆಲಕಾಲ ಮೈದಾನದಲ್ಲಿ ಕಕ್ಕಾಬಿಕ್ಕಿಯಾಗಿದ್ದರು.
ವಿಷಯಕ್ಕೆ ಹೋಗುವುದಾದರೆ.. ಕೆಕೆಆರ್ ಇನ್ನಿಂಗ್ಸ್ 9ನೇ ಓವರನ್ನ ಕುಮಾರ್ ಕಾರ್ತಿಕೇಯ ಎಸೆದರು.
ನಿತೀಶ್ ರಾಣಾ ಓವರ್‌ನ ನಾಲ್ಕನೇ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು.
ಆದರೆ, ಚೆಂಡು ಬಾಟಂ ಎಡ್ಜ್ ಆದ ಕಾರಣ ಬಾಲ್ ಅಲ್ಲೇ ರೋಲ್ ಆಯ್ತು. ಚೆಂಡು ಎಲ್ಲೂ ಕಾಣಿಸದ ಕಾರಣ ವಿಕೆಟ್ ಕೀಪರ್ ಅಲ್ಲೇ ನಿಂತು ಬಿಟ್ಟಿದ್ದರು.

ಇದೇ ಸಮಯದಲ್ಲಿ “ಹೇ ಇಶಾನ್ … ಚೆಂಡು ನಿನ್ನ ಪಕ್ಕದಲ್ಲಿಯೇ ಇದೆ” ಎಂದು ಕುಮಾರ್ ಕಾರ್ತಿಕೇಯನ್ ಕೀರುಚಿದರು.
ಅಷ್ಟೋತ್ತಿಗಾಗಲೇ ನಿತೀಶ್ ರಾಣಾ ಸಿಂಗಲ್ ಪೂರ್ಣಗೊಳಿಸಿದ್ದರು. ಚೆಂಡನ್ನು ಸ್ವೀಕರಿಸಿದ ಬುಮ್ರಾ ಇಶಾನ್ ಅದನ್ನು ನೋಡಿ ನಕ್ಕರು.
ಇಶಾನ್ ಕೂಡ ತನಗೇನೂ ಅರ್ಥವಾಗದವನಂತೆ ಲುಕ್ ಕೊಟ್ಟ. ಇದು ಮೈದಾನದಲ್ಲಿದ್ದ ಆಟಗಾರರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ishan-kishan-left-clueless-after-nitish-rana








