15 ದಿನವಾದ್ರೂ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿ : ಖಂಡ್ರೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಒಂದು ವಾರದ ಕಾಲ ಲಾಕ್ ಡೌನ್ ಜಾರಿಮಾಡಿದೆ. ಆದರೂ ನಗರದಲ್ಲಿ ಕೊರೊನಾ ಸ್ಫೋಟವಾಗುತ್ತಲೇ ಇದ್ದು, ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಕನಿಷ್ಠ 15 ದಿನವಾದರೂ ಬಿಗಿಯಾದ ಲಾನ್ ಡೌನ್ ಮಾಡಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಈಶ್ವರ್ ಖಂಡ್ರೆ, ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್ ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್ ಡೌನ್ ನಿಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಞರ ಅಭಿಪ್ರಾಯ ಪಡೆದು ಕನಿಷ್ಠ 15 ದಿನವಾದ್ರೂ ಬೆಂಗಳೂರಿನಲ್ಲಿ ಬಿಗಿಯಾಗಿ ಲಾಕ್ ಡೌನ್ ಮಾಡಿ. ಇಲ್ಲವಾದರೆ ಆ ‘ಭಗವಂತ’ ಬಂದರೂ ಬೆಂಗಳೂರನ್ನ ಕಾಪಾಡುವುದು ಕಷ್ಟವಾಗಲಿದೆ ಎಂದು ಬರೆದುಕೊಂಡು ಸಿಎಂ ಆಫ್ ಕರ್ನಾಟಕ ಹಾಗೂ ಕೆಪಿಸಿಸಿ ಪ್ರೆಸಿಡೆಂಟ್ ಗೆ ಟ್ಯಾಗ್ ಮಾಡಿದ್ದಾರೆ.








