ಶಿವಮೊಗ್ಗ : ಇಂದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಸಚಿವ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದ ಇಸ್ಕಾನ್ ಮಂದಿರದಲ್ಲಿ ಕೃಷ್ಣನ ತೊಟ್ಟಿಲು ತೂಗಿ ಗೋವಿಂದ ಗುರುಹರಿ ಗೋಪಾಲು ಬೋಲೊ ಎಂದು ಭಜನೆ ಮಾಡುವ ಮೂಲಕ ಕೃಷ್ಣನ ನಾಮಸ್ಮರಣೆ ಮಾಡಿದ್ದಾರೆ.
ಶಿವಮೊಗ್ಗ ತಾಲೂಕಿನ ಬಿದರೆಯ ಇಸ್ಕಾನ್ ಮಂದಿರದಲ್ಲಿ ಇಂದು ನಡೆದ ಕೃಷ್ಣನ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಕುಟುಂಬಸ್ಥರೊಂದಿಗೆ ಸಚಿವರು ಭಾಗಿಯಾಗಿದ್ದರು. ಈ ವೇಳೆ ಕೃಷ್ಣನ ತೊಟ್ಟಿಲು ತೂಗುವ ಮೂಲಕ ತಮ್ಮ ಭಕ್ತಿಯನ್ನು ಕೃಷ್ಣನಿಗೆ ಸಮರ್ಪಿಸಿದ್ದಾರೆ. ನಂತರ ಭಕ್ತರ ಜೊತೆ ಮೈಕ್ ಹಿಡಿದು ಕೃಷ್ಣನ ಭಜನೆ ಮಾಡಿದ್ದಾರೆ.








