ಆಗಸ್ಟ್ 15 ರಂದು ಅಯೋಧ್ಯೆಯಲ್ಲಿ ಐಎಸ್ಐ ದಾಳಿ ಸಾಧ್ಯತೆ – ಗುಪ್ತಚರ ಇಲಾಖೆ
ಅಯೋಧ್ಯೆ, ಜುಲೈ 28: ಪಾಕಿಸ್ತಾನದ ಐಎಸ್’ಐ ಆಗಸ್ಟ್ 15 ರಂದು ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ ಜನ್ಮ ಭೂಮಿಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಮಂಗಳವಾರ (ಜುಲೈ 28) ಬಹಿರಂಗಪಡಿಸಿವೆ.
ಗುಪ್ತಚರ ಸಂಸ್ಥೆ ಆರ್ & ಎಡಬ್ಲ್ಯೂ ಪ್ರಕಾರ, ಐಎಸ್ಐ ಅಫ್ಘಾನಿಸ್ತಾನದ ಲಷ್ಕರ್ ಮತ್ತು ಜೈಶ್ ಭಯೋತ್ಪಾದಕರಿಗೆ ದಾಳಿ ನಡೆಸಲು ತರಬೇತಿ ನೀಡುತ್ತಿದೆ. ದಾಳಿಗೆ ಮೂರರಿಂದ ಐದು ತಂಡಗಳನ್ನು ಕಳುಹಿಸಿಕೊಡಲು ಅದು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಭಯೋತ್ಪಾದಕ ಗುಂಪು ಪ್ರತ್ಯೇಕ ದಾಳಿ ನಡೆಸಬೇಕೆಂದು ಪಾಕಿಸ್ತಾನ ಬಯಸಿದೆ ಮತ್ತು ಅದು ಭಾರತದೊಳಗಿನ ಆಂತರಿಕ ದಾಳಿ ಎನ್ನುವಂತೆ ಬಿಂಬಿಸಲು ಪ್ರಯತ್ನ ನಡೆಸುತ್ತಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ.
ವಿವಿಐಪಿಗಳನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದ್ದು, ದೆಹಲಿ, ಅಯೋಧ್ಯೆ ಮತ್ತು ಕಾಶ್ಮೀರದ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮ್ ಜನ್ಮ ಭೂಮಿಗೆ ಅಡಿಪಾಯ ಹಾಕಲಿದ್ದಾರೆ. ವಿಶೇಷವೆಂದರೆ, 2019 ರಲ್ಲಿ ಸೆಕ್ಷನ್ 370 ಅನ್ನು ಕಾಶ್ಮೀರದಿಂದ ತೆಗೆದುಹಾಕಿದ ದಿನವೂ ಇದೇ ಆಗಿದೆ.