ಶ್ರೀಹರಿಕೋಟಾದಿಂದಲೇ ರಾಕೆಟ್ ಗಳ ಉಡಾವಣೆ ಮಾಡುವುದಕ್ಕೆ ಕಾರಣಗಳು ಇಲ್ಲಿವೆ..!
ಇದಕ್ಕೂ ಮುನ್ನ ತಿರುವನಂತಪುರಂನ ತುಂಭಾ ಅನ್ನೋ ಪ್ರದೇಶದಿಂದ ರಾಕೆಟ್ ಗಳನ್ನು ಉಡಾವಣೆ ಮಾಡ್ತಿದ್ರು. ಆದ್ರೆ ಅಲ್ಲಿನಿಂದ ಶ್ರೀಹರಿಕೋಟಗೆ ಯಾಕೆ ಬದಲಾಯಿಸಿದ್ರು..
ನಮ್ಮ ದೇಶದಲ್ಲಿ ಕೇವಲ ಶ್ರೀಹರಿಕೋಟಾದಿಂದಲೇ ರಾಕೆಟ್ ಗಳನ್ನ ಉಡಾವಣೆ ಮಾಡಲು ಕಾರಣಗಳೇನು..? ಮುಂದೆ ಓದಿ.
ಮೊದಲು ಕೇರಳಾದ ತುಂಭಾ ಎಂಬ ಪ್ರದೇಶದಿಂದ ರಾಕೆಟ್ಗಳನ್ನ ಪ್ರಯೋಗ ಮಾಡ್ತಿದ್ರು. ಅಲ್ಲಿ ಜನ ಸಂಖ್ಯೆ ಹೆಚ್ಚಾಗಿದ್ದ ಕಾರಣ ಕೇವಲ ಸಣ್ಣ ಸಣ್ಣ ರಾಕೆಟ್ ಗಳನ್ನ ಮಾತ್ರ ಉಡಾವಣೆ ಮಾಡಲಾಗುತ್ತಿತ್ತು.
ಈ ರಾಕೆಟ್ ಗಳು ಭೂಮಿಯಿಂದ 100 ಕಿಲೋಮೀಟರ್ ರಷ್ಟೆ ಸಾಗುತ್ತಿದ್ದವು. ಆ ನಂತರ ಭವಿಷ್ಯವನ್ನ ದೃಷ್ಠಿಯಲ್ಲಿಟ್ಟುಕೊಂಡು 1969ರಲ್ಲಿ ಈ ಅಂತರಿಕ್ಷಾ ಕೇಂದ್ರವನ್ನ ತುಂಭಾನಿಂದ ಶ್ರೀ ಹರಿಕೋಟಾಗೆ ಸ್ಥಳಾಂತರಿಸಲು ನಿರ್ಧರಿಸಿದರು.
ಶ್ರೀ ಹರಿಕೋಟಾ 43ಸಾವಿರದ 360 ಎಕರೆ ವಿಸ್ತೀರ್ಣ ವಿದೆ. ಇದರಲ್ಲಿ 50 ಕಿಲೋ ಮೀಟರ್ ಕಡಲ ತೀರವೂ ಇದೆ. ಇಲ್ಲಿ ಸತೀಶ್ ಧವಾನ್ ಸ್ಪೇಸ್ ಸೆಂಟರ್ ಕೂಡ ಇದೆ. ಭಾರತಕ್ಕೆ ಸಂಬಂಧಿಸಿದ ಎಲ್ಲಾ ಉಪಗ್ರಹಗಳನ್ನ ಇಲ್ಲಿಂದಲೇ ಪ್ರಯೋಗಿಸುತ್ತಾರೆ.
ದೇಶದಲ್ಲಿ ಭಾರತ ಅಂತರಿಕ್ಷಾ ಸಂಶೋಧನೆಗೆ ಸಂಬಂಧಿಸಿದ ಅನೇಕ ಕೇಂದ್ರಗಳಿವೆ. ಆದ್ರೆ ರಾಕೆಟ್ ಗಳನ್ನ ಮಾತ್ರ ಕೇವಲ ಶ್ರೀ ಹರಿಕೋಟದಿಂದಲೇ ಉಡಾವಣೆ ಮಾಡ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.
ಅದರಲ್ಲಿ ಮೊದಲನೇಯದು, ಭೂಮಧ್ಯೆ ರೇಖೆಗೆ ಹತ್ತಿರವಾಗಿರೋದು. ಹೀಗೆ ಹತ್ತಿರವಾಗಿರುವುದರಿಂದ ಇಲ್ಲಿಂದ ಪ್ರಯೋಗಿಸುವ ರಾಕೆಟ್ ಗಳಿಗೆ ಹೆಚ್ಚು ವೇಗ ಲಭಿಸುತ್ತದೆ. 1 ಸೆಕೆಂಡ್ ಗೆ 0.4 ಕಿಲೋ ಮೀಟರ್ ವೇಗ ಹೆಚ್ಚಾಗಿ ಲಭಿಸುತ್ತದೆ. ಇದರಿಂದ ರಾಕೆಟ್ ಗೆ ಇಂಧನ ಹೆಚ್ಚಾಗಿ ಖರ್ಚಾಗುವುದಿಲ್ಲ.
ಭಾರತದಲ್ಲಿ ಶ್ರೀಹರಿಕೋಟ, ಅಮೆರಿಕಾದಲ್ಲಿ ಕೆನಡಿ ಸ್ಪೇಟ್ ಸೆಂಟರ್, ಫ್ರೆಂಚ್ ನಲ್ಲಿ ಕೌರು ಭೂ ಮಧ್ಯರೇಖೆಗೆ ಹತ್ತಿರವಾಗಿವೆ.
ರಾಕೆಟ್ ಪ್ರಯೋಗಿಸಿದ ಬಳಿಕ ಖಚಿತವಾಗಿ ಆಕಾಶಕ್ಕೆ ಹೋಗುತ್ತವೆ ಅನ್ನೋ ಗ್ಯಾರಂಟಿ ಇಲ್ಲ. ತಾಂತ್ರಿಕ ದೋಷಗಳಿಂದ ಆಗಾಗ ರಾಕೆಟ್ ಗಳು ಕಂಟ್ರೋಲ್ ತಪ್ಪಿ ಕುಸಿದು ಬೀಳುತ್ತಿರುತ್ತವೆ.
ಅಂತಹ ಸಂದರ್ಭದಲ್ಲಿ ಆ ರಾಕೆಟ್ ಅವಶೇಷಗಳು ಜನವಸತಿ ಮೇಲೆ ಬಿದ್ದರೇ ಪ್ರಾಣ ನಷ್ಟವಾಗುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಶ್ರೀಹರಿಕೋಟ ಕಂಪ್ಲೀಟ್ ಸುರಕ್ಷಿತವಾಗಿದೆ. ಯಾಕೆಂದ್ರೆ ಇದರ ಸುತ್ತ ನೀರು ಇರುತ್ತೆ.
ದೊಡ್ಡದಾಗಿ ಜನ ಸಂಚಾರವಾಗಲಿ, ಮನೆಗಳಾಗಲಿ ಇಲ್ಲ. ಏನಾದ್ರೂ ಆಗಬಾರದು ಆದ್ರೆ ಅವರ ಅವಶೇಷಗಳು ನೀರಿನಲ್ಲಿ ಬಿದ್ದು ಹೋಗುತ್ವೆ. ದೊಡ್ಡದಾಗಿ ಪ್ರಾಣ ನಷ್ಟವಾಗಲಿ, ಆಸ್ತಿನಷ್ಟವಾಗಿ ಇರೋದಿಲ್ಲ.
ರಾಕೆಟ್ ಉಡಾವಣೆಗೆ ಭಾರಿ ಯಂತ್ರಗಳು, ಪರಿಕರಗಳು ಬೇಕಾಗುತ್ತವೆ. ಇದರಲ್ಲಿ ಕೆಲ ವಸ್ತಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.
ಆಗಾಗಿ ಸಾರಿಗೆ ಸೌಲಭ್ಯ ಹೆಚ್ಚಾಗಿರುವ ಸ್ಥಳಗಳಲ್ಲಿ ರಾಕೆಟ್ ಉಡಾವಣಾ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಶ್ರೀಹರಿಕೋಟಗೆ ರಸ್ತೆ, ರೈಲು, ಜಲಮಾರ್ಗಗಳು ಸಮೀಪವಾಗಿವೆ. ರೈಲು ನಿಲ್ದಾಣ 20 ಕಿಲೋ ಮೀಟರ್, ಚೆನ್ನೈ ಪೋರ್ಟ್ 70 ಕಿಲೋಮೀಟರ್ ದೂರದಲ್ಲಿವೆ.
ಇದಲ್ಲದೆ ರಾಕೆಟ್ ಪ್ರಯೋಗಕ್ಕೆ ಅನುಕೂಲಕರ ವಾತಾವರಣ ಇರಬೇಕು. ಅಧಿಕ ಉಷ್ಣಾಂಶವಾಗಲಿ, ಅಧಿಕ ಮಳೆಯಾಗುವ ಪರಿಸ್ಥಿತಿ ಇರಬಾರದು. ಶ್ರೀಹರಿಕೋಟದಲ್ಲಿ ಈ ರೀತಿಯ ವಾತಾವರಣವೇ ಇರುತ್ತೆ.
ವರ್ಷ ಪೂರ್ತಿ ಸಾಧಾರಣ ವಾತಾವರಣ ಇಲ್ಲಿ ಕಂಡುಬರುತ್ತೆ. ಕೇವಲ ಅಕ್ಟೋಬರ್ -ನವೆಂಬರ್ ನಲ್ಲಿ ಮಾತ್ರ ಅಧಿಕ ಮಳೆಯಾಗುತ್ತದೆ. ಇನ್ನುಳಿದ 10 ತಿಂಗಳು ಪ್ರಯೋಗಗಳಿಗೆ ವಾತಾವರಣ ಅನುಕೂಲಕರವಾಗಿತ್ತದೆ.
ಇನ್ನು ರಾಕೆಟ್ ಉಡಾವಣೆ ವೇಳೆ ಭೂಮಿ ತೀವ್ರವಾಗಿ ಕಂಪಿಸುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಸಹಿಸುವ ರೀತಿ ಭೂಮಿ ಅತ್ಯಂತ ದೃಢವಾಗಿರಬೇಕಾಗುತ್ತದೆ. ಶ್ರೀಹರಿಕೋಟದಲ್ಲಿ ಭೂಮಿ ಕಲ್ಲು ಮಿಶ್ರಣದೊಂದಿಗೆ ಅತ್ಯಂತ ದೃಢವಾಗಿರುತ್ತದೆ.
ಒಟ್ಟಾರೆ ರಾಕೆಟ್ ಉಡಾವಣೆಗೆ ಶ್ರೀಹರಿಕೋಟ ಒಂದು ಆಪ್ಷನ್ ಅಲ್ಲ. ಭಾರತ ದೇಶಕ್ಕಿರುವ ಅಪರೂಪದ ಅವಕಾಶ. ಈ ರೀತಿಯ ಪ್ರದೇಶ ದೇಶದಲ್ಲಿ ಬೇರೆಲ್ಲೂ ಇಲ್ಲ. ಹೀಗಾಗಿಯೇ ಇದು ರಾಕೆಟ್ ಉಡಾವಣೆ ಒಂದು ಕೋಟೆಯಾಗಿ ಮಾರ್ಪಟ್ಟಿದೆ.










