10 ಸ್ಯಾಟಲೈಟ್ ಗಳ ಉಡಾವಣೆ ಯಶಸ್ವಿ : ‘EOS-01’ ವಿಶೇಷತೆ ಏನು..?
ಆಂಧ್ರಪ್ರದೇಶ : ಇಸ್ರೋ ಇಂದು ಪಿಎಸ್‍ಎಲ್‍ವಿ ಸರಣಿಯ 51ನೇ ರಾಕೆಟ್ ಆದ ಪಿಎಸ್‍ಎಲ್‍ವಿ ಸಿ-49 ಉಡಾವಣೆ ಮಾಡಿದೆ. ಈ ರಾಕೆಟ್ ಭಾರತದ ಭೂವೀಕ್ಷಣೆ ಉಪಗ್ರಹ ‘EOS-01’ ಸೇರಿ 10 ಸ್ಯಾಟಲೈಟ್ ಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಆಂಧ್ರದ ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಂಡಿದ್ದು, ಎಲ್ಲ ಉಪಗ್ರಹಗಳು ಯಶಸ್ವಿಯಾಗಿ ತಮ್ಮ ತಮ್ಮ ಕಕ್ಷೆ ಸೇರಿಕೊಂಡಿವೆ.
ಮಿಷನ್ ಯಶಸ್ವಿಯಾಗುತ್ತಿದ್ದಂತೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್, ಯೋಜನೆಯ ಯಶಸ್ವಿಗೋಸ್ಕರ ಕೆಲಸ ಮಾಡಿರುವ ಎಲ್ಲ ಸಿಬ್ಬಂದಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ರು. ಈ ಹಿಂದಿನ ಯೋಜನೆಗಳಿಗಿಂತಲೂ ಈ ಯೋಜನೆ ನಮಗೆ ವಿಶೇಷವಾಗಿತ್ತು. ಕೊರೊನಾ ಹಾವಳಿ ನಡುವೆ ನಾವು ಈ ಕೆಲಸ ಮಾಡಿದ್ದೇವೆ. ಬೇರೆ ಕೆಲಸಗಳ ರೀತಿಯಲ್ಲಿ ಕೊರೊನಾ ವೈರಸ್ ಹಾವಳಿ ಸಂದರ್ಭದಲ್ಲಿ ನಾವು ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಎಲ್ಲ ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ಈ ಮಿಷನ್ ನಲ್ಲಿ ಪ್ರತಿಯೊಬ್ಬರು ಯಶಸ್ವಿಯಾಗಿ ಕೆಲಸ ಮಾಡಿದ್ದು, ಅದರ ಫಲವಾಗಿ ನಾವು ಸಫಲರಾಗಿದ್ದೇವೆ ಎಂದು ಸಿಬ್ಬಂದಿಗೆ ಅಭಿನಂದನೆ ಸಲ್ಲಿಕೆ ಮಾಡಿದರು.
ಇನ್ನು ದೀಪಾವಳಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಇಸ್ರೋ ಉಪಗ್ರಹಗಳ ಉಡಾವಣೆ ಮಾಡಿದ್ದು, ದೇಶದ ಜನರಲ್ಲಿ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದು ಶಿವನ್ ಅಭಿಪ್ರಾಯಪಟ್ಟಿದ್ದಾರೆ.
‘EOS-01’ ವಿಶೇಷತೆ ಏನು..?
‘EOS-01’ ಅಂದ್ರೆ Earth Observation Satellite ಎಂದರ್ಥ.
ಇದು ಭೂಮಿಯನ್ನು ವೀಕ್ಷಿಸುವ ಅತ್ಯಾಧುನಿಕ ಉಪಗ್ರಹವಾಗಿದೆ. ಇದಕ್ಕೆ ಹಗಲು, ರಾತ್ರಿ ಎನ್ನದೇ ಮೋಡಗಳ ಮಧ್ಯೆಯೂ ಭೂ ವೀಕ್ಷಣೆ ಮಾಡುವ ಸಾಮಥ್ರ್ಯವಿದೆ. ಇದು ಭಾರತ ಸೇನೆಯು ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲು ಸಹಕಾರಿಯಾಗಿದೆ. ಮೋಡಗಳ ನಡುವೆಯೂ ಈ ಸ್ಯಾಟೆಲೈಟ್ ಹೈರೆಸಲ್ಯೂಷನ್ ಚಿತ್ರ ಒದಗಿಸುತ್ತೆ. ಹಾಗೇ ಹವಾಮಾನ ವರದಿಯನ್ನೂ ನೀಡುತ್ತೆ.










