ಹುಬ್ಬಳ್ಳಿ: ಬೆಳಗಾವಿ (Belagavi) ಜಿಲ್ಲೆಯನ್ನು ಇಬ್ಬಾಗ ಮಾಡುವುದು ಒಳ್ಳೆಯದು. ಅದನ್ನು ವೈಜ್ಞಾನಿಕವಾಗಿ ವಿಭಾಗಿಸಬೇಕು ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದಾರೆ.
ಆಡಳಿತಯಂತ್ರ ಉತ್ತಮವಾಗಿ ನಡೆಯಬೇಕೆಂದರೆ ಜಿಲ್ಲೆಗಳು ಹಾಗೂ ತಾಲೂಕುಗಳು ಚಿಕ್ಕದಾಗಿರಬೇಕು. ಬೆಳಗಾವಿಯು ಇಬ್ಭಾಗವಾಗಿ ಪ್ರತ್ಯೇಕ ಜಿಲ್ಲೆಯಾಗಬೇಕು. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.
ಸಿಎಂ ಆಗಲು ಮಹಾನ್ ನಾಯಕ ಸಾವಿರ ಕೋಟಿ ತೆಗೆದಿಟ್ಟಿದ್ದಾರೆ ಅನ್ನೋದು ಯತ್ನಾಳ್ ವೈಯಕ್ತಿಕ ಹೇಳಿಕೆ. ಯತ್ನಾಳ್ ಹೇಳಿಕೆಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅವರು ಪ್ರತ್ಯೇಕ ಸಭೆ ಮಾಡಿದ್ದರ ಬಗ್ಗೆಯೂ ಮಾತನಾಡುವುದಿಲ್ಲ. ಇವುಗಳಿಗೆಲ್ಲ ಪಕ್ಷ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟರೆ ಅವರ ವ್ಯಕ್ತಿತ್ವಕ್ಕೆ ಒಳ್ಳೆಯದು. ಆದರೆ ಭಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ? ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ಗುಡುಗಿದ್ದಾರೆ.
ಕೇಂದ್ರ ಸಚಿವರ ಮೇಲೆ ಎಫ್ಐಆರ್ ಇದ್ದರೆ ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಕೇಂದ್ರ ಮಂತ್ರಿಗಳ ಮೇಲೆ ಅಧಿಕಾರಿ ಕೆಟ್ಟದಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದ ಮಾರ್ಗದರ್ಶನದಲ್ಲಿ ಇದೆಲ್ಲ ನಡೆಯುತ್ತಿದೆ. ಕುಮಾರಸ್ವಾಮಿ ( H D Kumaraswamy) ಕೇಂದ್ರಕ್ಕೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ.
[10:00 pm, 30/09/2024] Honnappa Ji: