ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ, ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ. ಈ ನಿಯಮದ ಮುಖ್ಯ ಉದ್ದೇಶಗಳು:
1. ಅಕ್ರಮ ನೋಂದಣಿ ತಡೆ: ಡಿಜಿಟಲ್ ಇಂಟಗ್ರೇಷನ್ ಮೂಲಕ, ನೋಂದಣಿಯ ಪ್ರಕ್ರಿಯೆಯನ್ನು ಸುಲಭಗೊಳಿಸಿ, ಅಕ್ರಮ ನೋಂದಣಿಗಳನ್ನು ತಡೆಯುವುದು.
2.ತೆರಿಗೆ ವಂಚನೆ ತಡೆ: ತೆರಿಗೆ ವಂಚನೆಗಳನ್ನು ತಡೆಯಲು, ನೋಂದಣಿ ಸಮಯದಲ್ಲಿ ಡಿಜಿಟಲ್ ಡೇಟಾ ಪರಿಶೀಲನೆ.
3.ಪಾರದರ್ಶಕತೆ: ನೋಂದಣಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು, ಡಿಜಿಟಲ್ ಇಂಟಗ್ರೇಷನ್.
4.ಅನ್ವಯಿಸಬಹುದಾದ ನಿಯಮಗಳು: ಎಲ್ಲಾ ನೋಂದಣಿ ಪ್ರಕ್ರಿಯೆಗಳಲ್ಲಿ ಈ ನಿಯಮವನ್ನು ಅನ್ವಯಿಸುವುದು
ಇ-ಖಾತಾ ವ್ಯವಸ್ಥೆ ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಯಾವುದೇ ದಾಖಲೆಯನ್ನು ಪಡೆಯದೆ ಅಂತಿಮ ಇ-ಖಾತಾ ನೀಡುವ ಪ್ರಕ್ರಿಯೆಯ ಮೇಲೆ ಪಾಲಿಕೆ ಅಧಿಕಾರಿಗಳಿಗೆ ಯಾವುದೇ ರೀತಿಯ ನಿಯಂತ್ರಣ ಮತ್ತು ಅಧಿಕಾರ ಇರುವುದಿಲ್ಲ.
ಆದ್ದರಿಂದ, ಮಾಲೀಕರು ನಿಗದಿಪಡಿಸಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಇ-ಖಾತಾ ಪಡೆದುಕೊಳ್ಳಬಹುದು ಎಂದು ಬಿಬಿಎಂಪಿಯು ಕಂದಾಯ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.
ಮಾಲೀಕರು ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ/ ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ) ಹಾಗೂ ಆಸ್ತಿ ಫೋಟೊವನ್ನು ಅಪ್‌ಲೋಡ್ (BBMPeAasthi.karnataka.gov.in) ಮಾಡಬೇಕಿದೆ.
ಈ ಎಲ್ಲ ದಾಖಲೆಗಳು ಬಿಬಿಎಂಪಿ ಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾವುದಾದರೂ ದಾಖಲೆಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಕೊರತೆ ಇದ್ದರೆ ಸಹಾಯಕ ಕಂದಾಯ ಅಧಿಕಾರಿಗೆ ಅರ್ಜಿ ವರ್ಗಾವಣೆಯಾಗಲಿದ್ದು, ಅವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಯೂಟ್ಯೂಬ್‌ನಲ್ಲಿ (https://
m.youtube.com/watch?v=JR3BxET46po) ಇ-ಖಾತಾ ಪಡೆಯುವ ಮಾಹಿತಿ ನೀಡಲಾಗಿದೆ. ಅಲ್ಲದೆ, ಇ-ಖಾತಾ ಸಹಾಯವಾಣಿ 94806 83695 ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಹೇಳಲಾಗಿದೆ.
ಈ ನಿಯಮದ ಜಾರಿಯಿಂದ, ಅಕ್ರಮ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಮತ್ತು ತೆರಿಗೆ ಸಂಗ್ರಹಣೆಯನ್ನು ಸುಧಾರಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.








