ಬೆಂಗಳೂರು: ವಿಧಾನ ಪರಿಷತ್ನಲ್ಲಿ ಪ್ರಜಾಪ್ರಭುತ್ವ ಯಾವ ರೀತಿ ಕಗ್ಗೊಲೆ ಆಯ್ತು ಅಂತಾ ನಾನು ನೋಡಿದೆ. ಸಭಾಪತಿ ಬಂದಾಗ ಬಾಗಿಲು ಹಾಕಿ, ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದ್ದೆ ಮಹಾಪರಾಧ. ಈ ಮೂಲಕ ಗೂಂಡಾಗಿರಿ ಮಾಡಿದ್ದೇ ಬಿಜೆಪಿ ಹಾಗೂ ಜೆಡಿಎಸ್. ಇದು ಪ್ರಜಾಪ್ರಭುತ್ವನಾ, ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಇದು ಕಾನೂನು ಸಚಿವ ಮಾಧುಸ್ವಾಮಿ ಫ್ಲಾನ್. ರಾತ್ರಿಯೇ ಇಂತಹ ಫ್ಲಾನ್ ಮಾಡಿದ್ದಾರೆ. ಬೆಲ್ ಮುಗಿಯುವ ಮುನ್ನವೇ ಸಭಾಪತಿ ಸ್ಥಾನಕ್ಕೆ ಉಪಸಭಾಪತಿ ಸ್ಥಾನಕ್ಕೆ ಧರ್ಮೇಗೌಡರನ್ನು ಕೂರಿಸಿದ್ದಾರೆ. ಇದು ಯಾವ ಸಂಸ್ಕøತಿ, ಯಾವ ಸಂವಿಧಾನದ ಪ್ರಕಾರ ನಡೆದಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಭಾಪತಿ ಸ್ಥಾನದಲ್ಲಿದ್ದವರು ವಿದೇಶಕ್ಕೆ ಹೋದಾಗ, ಅನಾರೋಗ್ಯ ಇದ್ದಾಗ, ನನ್ನ ಗೈರು ಹಾಜರಿಯಲ್ಲಿ ಕೆಲಸ ಮಾಡಿ ಅಂತಾ ಉಪಸಭಾಪರಿಗೆ ಹೇಳ್ತಾರೆ. ರೂಲ್ಸ್ ಬುಕ್ ಕೂಡ ಮಾಡಿಕೊಂಡಿದ್ದೇವೆ. ರೂಲ್ಸ್ ಕಮಿಟಿ ರೂಲ್ಸ್ ಮಾಡಿರ್ತಾರೆ. ಈ ನಿಯಮಾವಳಿಗಳ ಚೌಕಟ್ಟಿನಲ್ಲಿ ಸಭಾಪತಿಗಳು ಸದನ ನಡೆಸುತ್ತಾರೆ. ಗುರುವಾರ 10ನೇ ತಾರೀಖು ಸಭಾಪತಿ ಸದನ ನಡೆಸಿದ್ದಾರೆ. ಕಾನೂನು ಸಚಿವರ ಆದೇಶದ ಮೇರೆಗೆ ಕೌನ್ಸಿಲ್ ಮೀಟಿಂಗ್ ಕರೆದು ಆ ಲೆಟರ್ ನಲ್ಲಿ ಡಿಸ್ಕಷನ್ ಮಾಡಿ ಆ ಮೂಲಕ ನೋ ಕಾನ್ಫರೆನ್ಸ್ ಮೋಶನ್ ಮಾಡುತ್ತಾರೆ. ಆದರೆ ಈ ರೀತಿಯಲ್ಲಿ ಮಾಡದೆ 15ನೇ ತಾರೀಖಿನಂದು ಪರಿಷತ್ ನಡೆಸಿ ಎಂದು ಇದೆ. ಆದರೆ ಇದು ಆರ್ಡರ್ ಪ್ರಕಾರ ಇಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಸಿದರು.
ನೋಟಿಸ್ ನೀಡಿದ 14 ದಿನ ಆದ ನಂತರ 5 ದಿನಗಳ ಒಳಗೆ ಅವಿಶ್ವಾಸ ನಿರ್ಣಯ ಮಾಡಬೇಕು ಎಂದು ಇದೆ. ಆದರೆ ಎಲ್ಲಿ ಮಾಡಿದ್ದಾರೆ ಇದನ್ನೆಲ್ಲಾ. ಆರ್ಡರ್ ಪ್ರಕಾರ ಇಲ್ಲ ಅಂತ ರಿಜೆಕ್ಟ್ ಮಾಡಿದ್ದಾರೆ. ಚೇರ್ಮನ್ ಬರುವುದಕ್ಕೆ ಮುಂಚೆ ಬೆಲ್ ಆಗುತ್ತೆ. ಆ ನಂತರ ಮಾರ್ಷಲ್ ಸಭಾಪತಿ ಬಂದ್ರು ಅಂತ ಹೇಳುತ್ತಾರೆ. ಆ ನಂತರ ಅವರು ಬರುತ್ತಾರೆ. ಆದರೆ ಇದನ್ನು ಅವರು ಫಾಲೊ ಮಾಡಿಲ್ಲ. ಚೇರ್ಮನ್ ಬರುವ ಬಾಗಿಲನ್ನು ಚಿಲಕ ಹಾಕಿಸಿದ್ದಾರೆ. ಸಭಾಪತಿ ಬರುವುದಕ್ಕೆ ಬಿಟ್ಟಿಲ್ಲ. ಬೆಲ್ ಆಗುವಾಗ ಉಪಸಭಾಪತಿ ಕೂರಿಸಿದ್ದಾರೆ. ಇದು ಪ್ರಜಾಪ್ರಭುತ್ವನಾ, ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ ಎಂದು ಪ್ರಶ್ನಿಸಿ, ಇದು ಅಸಂವಿಧಾನಿಕ, ಕಾನೂನು ವಿರುದ್ಧವಾದದ್ದು ಎಂದು ಗುಡುಗಿದರು.
ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ನೋಡಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಬಾಗಿಲು ಹಾಕಿ ಚೇರ್ಮನ್ ತಡೆದಿದ್ದಾರೆ. ಇದು ಕಾನೂನು ಬಾಹಿರವಾದುದು. ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ. ಇದು ಕ್ರಿಮಿನಲ್ ಕೇಸ್ ಆಗುತ್ತೆ. ಸಭೆಯಲ್ಲಿ ನಡೆದ ಗೂಂಡಾಗಿರಿನಲ್ಲಿ ಜೆಡಿಎಸ್ ಕೂಡ ಭಾಗಿಯಾಗಿದೆ. ಇಬ್ಬರು ಸೇರಿಕೊಂಡು ಗುಂಡಾಗಿರಿ ಮಾಡಿದ್ದಾರೆ. ಇವತ್ತಿನ ಸನ್ನಿವೇಶ ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನ ವಿರೋಧಿ ನಡೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel