ಹಾವೇರಿ : ಯಾರೋ ಒಬ್ಬರು ಜಮೀನಿನಲ್ಲಿ ಗಾಂಜಾ ಬೆಳೆದು ತಪ್ಪು ಮಾಡಿದರು ಎಂದಮಾತ್ರಕ್ಕೆ ಅನ್ನಕೊಡುವ ಇಡೀ ರೈತ ಸಮುದಾಯವನ್ನು ದೂಷಿಸುವುದು ಸರಿಯಲ್ಲ.ರೈತರು ನಾಡಿನ ಅನ್ನದಾತರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಆ್ಯಪ್ ಬೆಳೆ ಸಮೀಕ್ಷೆ ಪ್ರಾಯೋಗಿಕ ಹಂತದಲ್ಲಿಯೇ ಯಶಸ್ವಿಯಾಗುತ್ತಿರುವುದು ಹೆಮ್ಮೆಯ ವಿಚಾರ.2017ರಲ್ಲಿ ಬೆಳೆ ಸಮೀಕ್ಷೆ ಮಾಡಿದಾಗ ಸುಮಾರು 3 ಸಾವಿರ ರೈತರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.ಆದರೀಗ ಆ್ಯಪ್ ಬೆಳೆಸಮೀಕ್ಷೆಯಲ್ಲಿ ಸೆ.11 ರ ಸಂಜೆವರೆಗೆ 76ಲಕ್ಷ ತಾಕುಗಳು ಸಮೀಕ್ಷೆಯಾಗಿರುವುದು ಹಮ್ಮೆಯ ವಿಚಾರ.ರೈತರು ಬಹಳ ಆಸಕ್ತಿಯಿಂದ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆ್ಯಪ್ ಬೆಳೆ ಸಮೀಕ್ಷೆ ನಡೆಸುವುದು ಅತ್ಯವಶ್ಯಕ ಎಂದರು.
ಕೆಲವೆಡೆ ನೆಟ್ ಪ್ರಾಬ್ಲಂನಿಂದಾಗಿ ತಡವಾಗಿದೆ.ಈಗ ಖಾಸಗಿ ನಿವಾಸಿಗಳ ಮೂಲಕವೂ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ನಟರಾಗಲೀ,ನಟಿಯರಾಗಲೀ ಯಾರೂ ತಪ್ಪುಮಾಡಿದರೂ ಅದು ತಪ್ಪೇ.ಡ್ರಗ್ಸ್ ದಂಧೆ ತನಿಖೆ ನಡೆಯುತ್ತಿದೆ.ಅಪರಾಧಿಗಳಾರು ಎಂಬುದು ತನಿಖೆಯಿಂದ ಪತ್ತೆಯಾಗಲಿದೆ.ಈ ಹಿಂದೆ ತಮ್ಮ ಅವಧಿಯಲ್ಲಿನ ಚಿತ್ರರಂಗದಲ್ಲಿ ಪರಿಶುದ್ಧ ವಾತಾವರಣವಿತ್ತು.ಶೂಟಿಂಗ್ವೇಳೆಯಲ್ಲಿ ಸಣ್ಣತಪ್ಪಾದರೂ ಪಶ್ಚಾತ್ತಾಪ ಪಡುವಂತಹ ವಾತಾವರಣವಿತ್ತು.ಈಗ ಚಿತ್ರರಂಗದಲ್ಲಿ ಡ್ರಗ್ ವಿಚಾರ ಕೇಳಿಬಂದಿರುವುದು ಬೇಸರದ ಸಂಗತಿ. ಈ ಹಾವಳಿ ಎಲ್ಲಾ ಎಂಗದಲ್ಲಿಯೂ ಇದೆ.ಚಿತ್ರರಂಗದಲ್ಲಾಗಿರುವುದು ಬಹಳ ಬೇಗ ಎದ್ದುಕಾಣುತ್ತದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
https://www.youtube.com/watch?v=lwfLpyPrcX0








