ಮುಂಬೈ: ಕೆಲಸ ಅರಿಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗಿದ್ದವರೆಲ್ಲಾ ಲಾಕ್ ಡೌನ್ ನಿಂದಾಗಿ ತಮ್ಮ ತಮ್ಮ ಊರುಗಳತ್ತ ಪಯಣ ಬೆಳೆಸಿದ್ದಾರೆ. ಅದರಲ್ಲೂ ಮಹಾರಾಷ್ಟ್ರದಿಂದ ನಮ್ಮ ರಾಜ್ಯದ ಜನರು ಕಾಲ್ನಡಿಗೆಯಲ್ಲೇ ಊರುಗಳನ್ನು ಮುಟ್ಟುತ್ತಿದ್ದಾರೆ. ಅಂತಹ 2 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನ ಕರ್ನಾಟಕ ಸರ್ಕಾರ ನಿನ್ನೆಯಷ್ಟೇ ವಾಪಸ್ ಕರೆ ತಂದಿದೆ. ಇದರ ಬೆನ್ನಲ್ಲೇ ಈಗ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಗುಳೆ ಬಂದಿರುವ ಕಾರ್ಮಿಕರ ಜವಾಬ್ದಾರಿ ನಮ್ಮದು ಎಂದು ಭರವಸೆ ನೀಡಿದ್ದಾರೆ.
ಗುಳೆ ಬಂದಿರುವ ಯಾವ ಕಾರ್ಮಿಕರು ತಾವಿದ್ದ ಸ್ಥಳಗಳಿಂದ ಬೇರೆ ಕಡೆಗೆ ಹೋಗಬೇಡಿ. ಲಾಕ್ ಡೌನ್ ಮುಗಿಯುವವರೆಗೂ ಇತರೆ ರಾಜ್ಯ, ಊರುಗಳಿಂದ ಬಂದಿರುವ ಕಾರ್ಮಿಕರನ್ನ ನಾವು ನೋಡಿಕೊಳ್ಳುತ್ತೇವೆ. ಊಟ, ನೀರು ಸೇರಿದಂತೆ ಮೂಲ ಸೌಕರ್ಯಗಳನ್ನೂ ಒದಗಿಸಿ ಕೊಡುತ್ತೇವೆ. ಆದರೆ ಅವರೂ ತಾವಿದ್ದ ಸ್ಥಳಗಳಿಂದ ಕದಲಬಾರದು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
5 ರೂಪಾಯಿಗೆ ಊಟ!!
ಲಾಕ್ ಡೌನ್ ಹಿನ್ನೆಲೆ ಶಿವ ಭೋಜನ ಯೋಜನೆಯಡಿ 10 ರೂಪಾಯಿಗೆ ಸಿಗುತ್ತಿದ್ದ ಊಟ ಏಪ್ರಿಲ್ 1ರಿಂದ 5 ರೂಪಾಯಿಗೆ ದೊರೆಯಲಿದೆ. ಲಾಕ್ ಡೌನ್ ನಿಂದಾಗಿ ಗುಳೆ ಬಂದ ನಿಮ್ಮಲ್ಲಿ ಆತಂಕ ಮನೆ ಮಾಡಿದೆ ಅನ್ನೋದು ನನಗೂ ಗೊತ್ತಿದೆ. ಆದ್ರೆ, ನೀವು ಊರುಗಳಿಗೆ ಹೊರಡಲು ಮುಂದಾದ್ರೆ, ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಯಾರೂ ತಮ್ಮ ಸ್ಥಳಗಳಿಂದ ಬೇರೆ ಕಡೆಗೆ ಹೋಗಬೇಡಿ ಠಾಕ್ರೆ ಮನವಿ ಮಾಡಿದ್ದಾರೆ.








