ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ತೃಪ್ತಿ ತಂದಿದೆ : ಉಮೇಶ ಕತ್ತಿ Saaksha Tv
ಹುಕ್ಕೇರಿ: ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ತೃಪ್ತಿ ತಂದಿದೆ. ಸಂಜೆ ವಿಜಯಪುರಕ್ಕೆ ಹೋಗಿ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ನಿನ್ನೆ ಸಿಎಂ ಬೊಮ್ಮಾಯಿ ಜಿಲ್ಲೆಗಳಿಗೆ ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಘೋಷಣೆ ಮಾಡಿದರು. ಈ ಕರಿತು ಹುಕ್ಕೇರಿ ತಾಲೂಕಿನ ಹುಲ್ಲೋಳಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಉಸ್ತುವಾರಿ ಜಿಲ್ಲೆ ಅಷ್ಟೇ ಬದಲಾಗಿದೆ. ಬೇರೆ ಏನೂ ಬದಲಾವಣೆ ಆಗಿಲ್ಲ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ನನಗೆ ಉಸ್ತುವಾರಿ ಕೊಡಲು ಆಗುವುದಿಲ್ಲ.ರಾಜ್ಯದಲ್ಲೇ ಉಸ್ತುವಾರಿ ಕೊಟ್ಟಿದ್ದಾರೆ. ಹೀಗಾಗಿ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಂತೋಷದಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.