YUVI | ರೋಹಿತ್ ಗೆ ಟೆಸ್ಟ್ ಕ್ಯಾಪ್ಟನ್ಸಿ ಭಾವನಾತ್ಮಕ ನಿರ್ಧಾರವಷ್ಟೆ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
ವಿರಾಟ್ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ ನಂತರ ರೋಹಿತ್ ಶರ್ಮಾಗೆ ನಾಯಕತ್ವ ನೀಡಿದ್ದು ಭಾವನಾತ್ಮಕ ನಿರ್ಧಾರ ಎಂದಿದ್ದಾರೆ ಯುವರಾಜ್ ಸಿಂಗ್.
ಫಿಟ್ನೆಸ್ ಪರಿಗಣಿಸಿ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಟೆಸ್ಟ್ ನಾಯಕನನ್ನಾಗಿ ಮಾಡಿದ್ದು ಯೋಚಿಸದೇ ಮಾಡಿರುವ ನಿರ್ಧಾರ ಎಂದು ಹೇಳಿದ್ದಾರೆ.
34ರ ಹರೆಯದ ರೋಹಿತ್ ಕಳೆದ ಎರಡು ವರ್ಷಗಳಿಂದ ಪದೇ ಪದೇ ಗಾಯದ ಸಮಸ್ಯೆಗಳಿಗೆ ಒಳಗಾಗುತ್ತಲೇ ಇದ್ದಾರೆ.
ಟೀಂ ಇಂಡಿಯಾ ಟೆಸ್ಟ್ ನಾಯಕತ್ವದ ಹೊಣೆಗಾರಿಕೆ ಅವರ ಫಿಟ್ನೆಸ್ ಮೇಲೆ ಹೆಚ್ಚಿನ ಒತ್ತಡ ಹೇರಲಿದೆ ಎಂದಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ನಲ್ಲಿ ಪೂರ್ಣಪ್ರಮಾಣವಾಗಿ ಆರಂಭಿಕರಾಗಿ ಎರಡು ವರ್ಷಗಳಷ್ಟೆ ಆಗಿದೆ.
ಟೆಸ್ಟ್ ಬ್ಯಾಟರ್ ಆಗಿ ಅವರಿನ್ನೂ ಈಗೀಗ ಹೊಂದಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಬ್ಯಾಟಿಂಗ್‌ನತ್ತ ಗಮನ ಹರಿಸುವುದು ರೋಹಿತ್ ಗೆ ಹಾಗೂ ತಂಡಕ್ಕೆ ಅತ್ಯವಶ್ಯಕ ಎಂದಿದ್ದಾರೆ.
ಒಟ್ಟಾರೆ, ಟೆಸ್ಟ್ ನಾಯಕತ್ವ ರೋಹಿತ್ ಬ್ಯಾಟಿಂಗ್ ಜೊತೆಗೆ ಫಿಟ್ನೆಸ್ ಮೇಲೆ ಪ್ರಭಾವ ಬೀರುತ್ತಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ರೋಹಿತ್ ಸೀಮಿತ ಓವರ್ ಗಳ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸಿದ ಯುವಿ, ವೈಟ್ ಬಾಲ್ ಕ್ರಿಕೆಟ್ ನಲ್ಲಿ ರೋಹಿತ್ ಅವರನ್ನು ತಂಡದ ನಾಯಕನಾಗಿ ಬಹಳ ಹಿಂದೆಯೇ ನೇಮಕವಾಗಬೇಕಿತ್ತು ಆದರೆ ವಿರಾಟ್ ಕೊಹ್ಲಿ ಅದ್ಭುತವಾಗಿ ತಂಡವನ್ನು ಮುನ್ನಡೆಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶ್ರೇಷ್ಠ ನಾಯಕರಾಗಿದ್ದರು ಎಂದಿದ್ದಾರೆ.
it-was-emotional-decision-make-rohit-sharma-captain-test