ಇಶಾಂತ್ ಶರ್ಮಾ… ಟೀಮ್ ಇಂಡಿಯಾದ ವೇಗಿ. ತನ್ನ ಕ್ರಿಕೆಟ್ ಬದುಕಿನಲ್ಲಿ ಹಲವಾರು ಕೋಚ್‍ಗಳನ್ನು ಕಂಡಿದ್ದಾರೆ. ಹಾಗೇ ಹಲವಾರು ಏರಿಳಿತಗಳನ್ನು ಕಂಡಿದ್ದಾರೆ. ಆದ್ರೆ ಕಳೆದ ಐಪಿಎಲ್ ಋತುವಿನಲ್ಲಿ ಇಶಾಂತ್ ಶರ್ಮಾ ಸಾಕಷ್ಟು ಒತ್ತಡಕ್ಕೆ ಸಿಲುಕಿದ್ರಂತೆ. ಆಗ ಆ ಒಬ್ಬ ಕೋಚ್ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಾರೆ. ಹಾಗಿದ್ರೆ ಆ ಕೋಚ್ ಯಾರು ?

ಈ ಪ್ರಶ್ನೆಗೆ ಇಶಾಂತ್ ಉತ್ತರ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್. ರಿಕಿ ಪಾಂಟಿಂಗ್ ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತುದಾರನಾಗಿದ್ದರು. ಆಗ ಪಾಂಟಿಂಗ್ ಇಶಾಂತ್ ಜೊತೆ ಚರ್ಚೆ ಮಾಡಿದ್ರಂತೆ, ಪಾಟಿಂಗ್ ಅವರ ಆತ್ಮವಿಶ್ವಾಸದ ಮಾತುಗಳು ನನ್ನನ್ನು ಪುಳಕಗೊಳ್ಳುವಂತೆ ಮಾಡಿದ್ದವು ಎಂದು ಇಶಾಂತ್ ಹೇಳಿದ್ದಾರೆ.
ರಿಕಿ ಪಾಂಟಿಂಗ್ ನಾನು ನೋಡಿರುವವ ಪೈಕಿ ಅತ್ಯುತ್ತಮ ಕೋಚ್. ಅಂತಹ ತರಬೇತುದಾರನನ್ನು ನಾನು ಯಾವತ್ತೂ ನೋಡಿಲ್ಲ. ಕಳೆದ ಐಪಿಎಲ್ ವೇಳೆ ನಾನು ತುಂಬಾ ನರ್ವಸ್ ಆಗಿದ್ದೆ. ತರಬೇತಿ ಶಿಬಿರಕ್ಕೆ ಹೋಗುವಾಗ ನನಗೆ ಹೊಸಬನಂತೆ ಭಾಸವಾಗುತ್ತಿತ್ತು. ಆದ್ರೆ ರಿಕಿ ಪಾಂಟಿಂಗ್ ಜೊತೆ ಮಾತನಾಡಿದ ನಂತರ ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಷಿಸಿತ್ತು ಅಂತ ಇಶಾಂತ್ ಜೇಳಿಕೊಂಡಿದ್ದಾರೆ.
ರಿಕಿ ಪಾಂಟಿಂಗ್ ಹೇಳಿದ್ದು ಇಷ್ಟೇ.. ನೀನು ತಂಡದ ಹಿರಿಯ ಆಟಗಾರ. ಯುವ ಆಟಗಾರರಿಗೆ ನೀನು ಸಲಹೆ ಮಾರ್ಗದರ್ಶನವನ್ನು ನೀಡಬೇಕು. ನೀನು ನನ್ನ ಮೊದಲ ಆಯ್ಕೆ ಅಂತ ಹೇಳಿದ್ದರು. ಇದು ನನಗೆ ಸ್ಫೂರ್ತಿಯನ್ನು ನೀಡಿತ್ತು. ಅಲ್ಲದೆ ಕಳೆದ ಋತುವಿನ ಐಪಿಎಲ್‍ನಲ್ಲಿ 13 ವಿಕೆಟ್‍ಗಳನ್ನು ಪಡೆಯಲು ಯಶಸ್ವಿಯಾದೆ ಅಂತ ಇಶಾಂತ್ ಹೇಳಿಕೊಂಡಿದ್ದಾರೆ.








