ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts
ಇಟಲಿ… ಯೂರೋಪ್ ನ ಅತ್ಯಂತ ಸುಂದರ ದೇಶ. ಈ ದೇಶದ ಅನೇಕ ವಿಶೇಷತೆಗಳು ಸಂಪ್ರದಾಯಗಳು, ರೋಮಾಂಚನಕಾರಿ ಸಂಗತಿಗಳು , ಸಂಸ್ಕೃತಿ ,ಆಹಾರ ಪದ್ಧತಿ, ಜೀವನ ಶೈಲಿ ಹೀಗೆ ಅನೇಕ ವಿಚಾರಗಳನ್ನ ತಿಳಿದುಕೊಳ್ಳೋಣ.
ಗ್ರೀಸ್ ನ ನಂತರ ಯೂರೋಪಿನ ಅತ್ಯಂತ ಪ್ರಾಚೀನ ರಾಷ್ಟ್ರ ಇಟಲಿ. ವಿಸ್ತೀರ್ಣದ ವಿಚಾರದಲ್ಲಿ ಯೂರೋಪ್ ನ 5ನೇ ಅತ್ಯಂತ ದೊಡ್ಡ ರಾಷ್ಟ್ರ ಇಟಲಿಯ ರಾಜಧಾನಿ – ರೋಮ್ – ಮೂಲಗಳ ಪ್ರಕಾರ 3000 ವರ್ಷಗಳಷ್ಟು ಹಳೆಯ ದೇಶ ಎನ್ನಲಾಗಿದೆ. ರೋಮ್ … ಈ ಹೆಸರು ಕೇಳ್ತಿದ್ದಂತೆ ಅಲ್ಲಿನ ಸೌಂದರ್ಯ ಕಣ್ಮುಂದೆ ಬರುತ್ತೆ.. ಪ್ರೀತಿಯಲ್ಲಿರುವವರಿಗೆ ಈ ತಾಣ ಹಾಟ್ ಫೇವರೇಟ್.. ಅನೇಕರ ಡ್ರೀಮ್ ಸ್ಪಾಟ್. ಇಟಲಿ ಅತಿ ಹೆಚ್ಚು ಮಂದುವರೆದ ಶ್ರೀಮಂತ ರಾಷ್ಟ್ರ. ಅರ್ಥವ್ಯವಸ್ಥೆ ವಿಚಾರಕ್ಕೆ ಬಂದ್ರೆ ಈ ದೇಶ ಇಡೀ ವಿಶ್ವದಲ್ಲಿ 8 ನೇ ಸ್ಥಾನಕ್ಕೆ ಬರುತ್ತೆ. ಇಲ್ಲಿನ ಜನರ ಜೀವನ ಶೈಲಿ ಅತಿ ಉತ್ತಮವಾಗಿದ್ದು, ಅತ್ಯಾಧುನಿಕತೆಯ ಜೀವನ ಸಾಗಿಸುತ್ತಾರೆ.
ಇನ್ನೂ ಇಷ್ಟು ಮುಂದುವರೆದಿರುವ ಇಟಲಿ ಕೂಡ ಭಾರತದ ರೀತಿ ಅಂದ ವಿಶ್ವಾಸದ ರಾಷ್ಟ್ರ.. ಇನ್ನೂ ಒಂದು ಕಾಲಿನ ಮೇಲೆ ಪೊರಕೆ ತಾಗಿಸಿಬಿಟ್ರೆ ಆ ವ್ಯಕ್ತಿಗೆ ಜೀವನ ಪೂರ್ತಿ ಮದುವೆಯಾಗುವುದಿಲ್ಲ ಎಂದು ಇಲ್ಲಿನ ಜನ ನಂಬ್ತಾರೆ. ಇನ್ನೂ ನಮ್ಮ ಭಾರತದಲ್ಲಿನ ಜನರ ನಂಬಿಕೆಯಂತೆಯೇ ಇಟಲಿಯಲ್ಲೂ ಕೂಡ ರಸ್ತೆ ಅಡ್ಡ ಬೆಕ್ಕು ಹೋದ್ರೆ ಅಶುಭ ಎಂದು ಪರಿಗಣಿಸಲಾಗುತ್ತೆ.
ಈ ದೇಶದ ಮದ್ಯ ವರ್ಲ್ಡ್ ಫೇಮಸ್.. ಇಡೀ ವಿಶ್ವದಲ್ಲೇ ಸಿಗುವ ಮದ್ಯಗಳಲ್ಲಿ ಇಟಲಿಯ ಮದ್ಯ ಒನ್ ಆಫ್ ಬೆಸ್ಟ್ ಎಂದು ಪರಿಗಣಿಸಲಾಗಿದೆ. ಇಟಲಿ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಮದ್ಯ ಉತ್ಪಾದಿಸುವ ದೇಶವೂ ಹೌದು. ಪ್ರತಿ ಸಂಭ್ರಮಾಚರಣೆ, ಕಾರ್ಯಕ್ರಮದಲ್ಲಿ ಮನೆ ಮಮದಿಯ ಜೊತೆಗೆ ಮದ್ಯ ಸೇವನೆ ಇಲ್ಲಿನ ಪರಂಪರೆಯೂ ಹೌದು. ಫೆರಾರಿ , ಲೊಂಬರ್ಗಿನಿ , ಬೊಗಾಟಿಯಂತಹ ಇನ್ನೂ ಹಲವು ಸೂಪರ್ ಕಾರ್ ಗಳ ನಿವಾಸ ಈ ಇಟಲಿ. ಈ ಬ್ರಾಂಡ್ ಗಳ ಕಾರುಗಳು ಇಟಲಿಯಲ್ಲೇ ತಯಾರಾಗುತ್ತವೆ.. ಇಡೀ ವಿಶ್ವಾದ್ಯಂತ ಈ ಕಾರುಗಳು ಸಖತ್ ಫೇಮಸ್ ಕೂಡ ಹೌದು..
ಇಟಲಿಯ ಸಾಕ್ಷರಾತಾ ಪ್ರಮಾಣ ರೇಟ್ ಹತ್ತಿರ ಹತ್ತರ 100% ಇದೆ. ಅಂದ್ರೆ ಬಹುತೇಕ ಎಲ್ಲರೂ ವಿದ್ಯಾವಂತರೇ ಆಗಿರುವುದು ಕೂಡ ಈ ದೇಶದ ಅಭಿವೃದ್ಧಿಗೆ ಮುಖ್ಯ ಕಾರಣ. ಇಲ್ಲಿನ ಮಿಲಿಟರಿ ಕೂಡ ವಿಶ್ವದ ಶಕ್ತಿಶಾಲಿ ಮಿಲಿಟರಿಗಳಲ್ಲಿ ಒಂದಾಗಿದೆ.. ಹಾಗೆ ನೋಡೋದಾದ್ರೆ ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ 6 ಲಕ್ಷಕ್ಕಿಂತಲೂ ಅಧಿಕ ಇಟಲಿಯ ಸೈನಿಕರು ಮೃತಪಟ್ಟಿದ್ದರು. 10 ಲಕ್ಷಕ್ಕಿಂತ ಹೆಚ್ಚಿನ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು.
ಇಲ್ಲಿನ ಆರ್ಥಿಕ ವ್ಯವಸ್ಥೆಯ ಪ್ರಮುಖ ಮೂಲ ಪ್ರವಾಸೋದ್ಯಮ. ಪ್ರತಿ ವರ್ಷ ಇಟಲಿಗೆ ಹೊರದೇಶದಿಂದ ಸುಮರು 5 ಕೋಟಿಗೂ ಅಧಿಕ ಮಂದಿ ಪ್ರವಾಸಕ್ಕಾಗಿ ಭೇಟಿ ನಿಡ್ತಾರೆ. ಇಡೀ ಯೂರೋಪ್ ನಲ್ಲಿ ಅತಿ ಹೆಚ್ಚು ಭೂಕಂಪನ ಹಾಗೂ ಜ್ವಾಲಾಮುಖಿ ಸ್ಪೋಟವಾಗುವ ಏಕಮಾತ್ರ ದೇಶ ಇಟಲಿ. ಇಲ್ಲಿಯ ಮಿಲಾಂದ್ ಸಿಟಿಯಲ್ಲಿ ಖುಷಿಯಾಗಿರೋದಕ್ಕೂ ಕಾನೂನು ಇದೆ.. ಹೌದು.. ಯಾರನ್ನಾದ್ರೂ ಭೇಟಿಯಾದಾಗ, ಸಭೆ ಸಮಾರಂಭಗಳಲ್ಲಿ ಭಾಗಿಯಾದಾಗ ಮುಖದ ಮೇಲೆ ನಗುವಿರಲೇಬೇಕೆಂಬ ನಿಯಮೇ ಇದೆ.
ಇಟಲಿಯಲ್ಲಿ ಸುಮಾರು 550 ದ್ವೀಪಗಳಿವೆ. ಆದ್ರೆ ಅವುಗಳ ಪೈಕಿ ಪೊವೇಗ್ಲಿಯಾ ದ್ವೀಪವನ್ನ ಎಲ್ಲಕ್ಕಿಂತ ಅಪಾಯಕಾರಿ ದ್ವೀಪವೆಂದು ಪರಿಗಣಿಸಲಾಗಿದೆ. ಈ ಐಲ್ಯಾಂಡ್ ಅನ್ನ ಸಾವಿನ ಐಲ್ಯಾಂಡ್ ಅಂತ ಸಹ ಕರೆಯಲಾಗುತ್ತೆ.. ಇಲ್ಲಿಗೆ ಹೋದವರು ಯಾರೂ ವಾಪಸ್ ಬರೋದಿಲ್ಲ.. ಹೀಗಾಗಿಯೇ ಇಲ್ಲಿಗೆ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ..
ಇಲ್ಲಿನ ಜನಪ್ರಿಯ ಆಟ ಸಾಕರ್. ಈ ಗೇಮ್ ನಲ್ಲಿ ಇಟಲಿ 4 ಬಾರಿ ವಿಶ್ವಕಪ್ ಸಹ ಗೆದ್ದಿದೆ. ವಿಶ್ವದ ಮೊದಲ ಪಿಯಾನೋ ತಯಾರಾಗಿದ್ದು ಇಟಲಿಯಲ್ಲಿಯೇ. ಇಟಾಲಿಯನ್ ಆಹಾರ ಇಡೀ ವಿಶ್ವಾದ್ಯಂತ ಫೇಮಸ್.. ಅದ್ರಲ್ಲೂ ಪಿಜ್ಜಾ..
ಪ್ರವಾಸಿ ತಾಣಗಳು
ರೋಮ್ – ಸಾಯೋ ಅಷ್ಟರಲ್ಲಿ ಒಮ್ಮೆಯಾದ್ರೂ ರೋಮ್ ನೋಡಲೇಬೇಕು ಅನ್ನೋದು ಎಷ್ಟೋ ಜನರ ಕನಸು. ಪ್ರಾಚೀನ ಸಂಸ್ಕೃತಿ , ಕಲೆಯಿಂದ ಈ ನಗರ ಅತ್ಯಂತ ವರ್ಣರಂಜಿತ ಹಾಗೂ ಸುಂದರವಾಗಿ ಕಾಣಿಸುತ್ತೆ. ಇಲ್ಲಿನ ಅತಿ ಹೆಚ್ಚು ಜನಪ್ರಿಯ ತಾಣ ಅಂದ್ರೆ ಅದು ಕೊಲೋಸಿಯಮ್.. ರೋಮಾನ ಆಡಳಿತಾವಧಿಯಲ್ಲಿ ಇದು ನಿರ್ಮಾಣವಾಗಿತ್ತು. ಪ್ರಪಂಚದ ಅದ್ಭುತಗಳಲ್ಲಿ ಇದು ಕೂಡ ಒಂದು.
ಪಿಸಾ – ಲಿನಿಂಗ್ ಟವರ್ ( ವಾಲಿರುವ ಮಿನಾರ್ ) ನಿಂದಾಗಿ ಈ ಸಿಟಿ ಫೇಮಸ್. ಈ ಮಿನಾರ್ ಅನ್ನ ಪೂರ್ಣವಾಗಿ ನಿರ್ಮಾಣ ಮಾಡಿ ಮುಗಿಸಲು 200 ವರ್ಷಗಳನ್ನ ತೆಗೆದುಕೊಂಡಿತ್ತು.