ಭದ್ರತಾ ಪಡೆಗಳ ಮೇಲೆ ನಕ್ಸಲರ ದಾಳಿ | ಸಬ್ ಇನ್ಸ್ ಪೆಕ್ಟರ್ ಹುತಾತ್ಮ – Saaksha Tv
ಛತ್ತೀಸ್ಗಢ: ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಕ್ಸಲರ ಐಇಡಿ ಸ್ಪೋಟಕ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಸಬ್ ಇನ್ಸ್ಪೆಕ್ಟರ್ ಹುತಾತ್ಮರಾಗಿರುವ ಘಟನೆ ಛತ್ತೀಸ್ಗಢ್ನ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.
ನಾರಾಯಣಪುರ ಜಿಲ್ಲೆಯಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಕ್ಸಲರು ದಾಳಿ ಮಾಡಿದ್ದು, ದಾಳಿಯಲ್ಲಿ ಎಎಸ್ಐ ರಾಜೇಂದ್ರಸಿಂಗ್ ಹುತಾತ್ಮರಾಗಿದ್ದು ಗಿದ್ದು, ಮತ್ತೋರ್ವ ಹೆಡ್ ಕಾನ್ಸ್ಟೇಬಲ್ ಮಹೇಶ್ ಗಾಯಗೊಂಡಿದ್ದಾರೆ.
ಮಹೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ರಾಯಪುರಕ್ಕೆ ಏರ್ಲಿಫ್ಟ್ ಮಾಡಲಾಗಿದೆ. ಹುತಾತ್ಮ ರಾಜೇಂದ್ರ ಸಿಂಗ್ ಉತ್ತರಾಖಂಡ್ನ ತೆಹ್ರಿ ಗರ್ವಾಲ್ ಜಿಲ್ಲೆಯವರಾಗಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಐಟಿಬಿಪಿಯ 53 ಬೆಟಾಲಿಯನ್ ಸಿಬ್ಬಂದಿ ಸೋನಪುರ ಮತ್ತು ಧೋಂಡರಿಬೇಡ ಗ್ರಾಮಗಳ ನಡುವೆ ಗಸ್ತು ತಿರುಗುತ್ತಿದ್ದರು. ಈ ವೇಳೆ 8.30ರ ಸುಮಾರಿಗೆ ನಕ್ಸಲರು ಪ್ರಬಲವಾದ ಸ್ಪೋಟಕಗಳನ್ನ ಸಿಡಿಸಿದ್ದಾರೆ ಎಂದು ನಾರಾಯಣಪುರ ಜಿಲ್ಲಾ ಪೊಲೀಸ್ ವರಿಷ್ಠ ಸಂದಾನಂದ ಕುಮಾರ್ ತಿಳಿಸಿದ್ದಾರೆ. ಈ ದಾಳಿ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.