ಶಾಲೆಗಳನ್ನು ಪುನಾರಂಭಿಸಲು ಇದು ಸಮಯ : ಶಾಸಕ ವಿರೂಪಾಕ್ಷಪ್ಪ
ದಾವಣಗೆರೆ : ಶಾಲೆಗಳಿಲ್ಲದೆ ಮಕ್ಕಳು ಖಿನ್ನತೆಗೊಳಗಾಗಿದ್ದಾರೆ. ಈಗಾಗಲೇ ಕೊರೊನಾ ಅಲೆ ಕಡಿಮೆಯಾಗಿದೆ. ಶಾಲೆಗಳನ್ನು ಪುನಾರಂಭಿಸಲು ಇದು ಸಮಯ. ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಸರ್ಕಾರ ಸೂಕ್ತ ಆದೇಶ ಹೊರಡಿಸಿಬೇಕು ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ಆಗ್ರಹಿಸಿದ್ದಾರೆ.
ಕಾಕನೂರು ಕೋವಿಡ್ ಕೇರ್ ಸೆಂಟರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷವೂ ಶಾಲೆ ಆರಂಭಿಸದಿದ್ದರೆ ಮಕ್ಕಳು ಖಿನ್ನತೆಗೊಳಗಾಗುತ್ತಾರೆ. ದಿನದಿನ ಬಿಟ್ಟು ದಿನ ಶಾಲೆ ಆರಂಭಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಶಾಲೆ ಆರಂಭಿಸಬೇಕು.

ಶಾಲೆ ಪುನಾರಂಭದಿಂದ ಮಕ್ಕಳಲ್ಲಿರುವ ಖಿನ್ನತೆ ಹೋಗಲಾಡಿಸಬಹುದು. ಎಷ್ಟೇ ಖರ್ಚಾದರೂ ಶಾಲೆಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಶಾಲೆಗಳ ಸಮಯವನ್ನು ಸಚಿವರು, ಸಿಎಂ ನಿರ್ಧರಿಸುತ್ತಾರೆ. ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮೂರನೇ ಅಲೆ ಬಗ್ಗೆ ಪ್ರತಿಕ್ರಿಯೆ ನೀಡಿ, ಇನ್ನೂ ಎರಡನೇ ಅಲೆಯೇ ಹೋಗಿಲ್ಲ. ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳುವದರಿಂದ ಮೂರನೇ ಅಲೆ ತಡೆಗಟ್ಟಬಹುದು. ಎಲ್ಲರೂ ಕೋವಿಡ್ ನಿಯಮಾವಳಿ ಪಾಲಿಸಿದ್ರೆ ಸೋಂಕಿನ ಮೇಲೆ ನಿಯಂತ್ರಣ ಸಾಧಿಸಿಬಹುದು. ಮೂರನೇ ಅಲೆ ಬಗ್ಗೆ ಎಚ್ಚರಿಕೆ ವಹಿಸೋಣ ಎಂದು ಕರೆಕೊಟ್ಟರು.








