ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಕಾಶ್ಮೀರಿ ಪೊಲೀಸ್ – Saaksha Tv
ಜಮ್ಮು ಮತ್ತು ಕಾಶ್ಮೀರ : ನಿನ್ನೆ ತಡರಾತ್ರಿ ಮತ್ತು ಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದೇವೆ ಎಂದು ಕಾಶ್ಮೀರ ವಲಯ ಪೊಲೀಸ್ ಟ್ವಿಟ್ ಮಾಡಿದ್ದಾರೆ.
ಜಮ್ಮು&ಕಾಶ್ಮಿರದ ಪುಲ್ವಾಮಾದ ಗಂದೇರ್ಬಾಲ್ ಮತ್ತು ಹಂದ್ವಾರಾದ 4-5ಕಡೆ ಕಾರ್ಯಾಚರಣೆ ನಡೆಸಿದ್ದು ಜೈಷ್ ಎ ಮೊಹಮದ್ ಸಂಘಟನೆಗೆ ಸೇರಿದ ಇಬ್ಬರನ್ನು ಮತ್ತು ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಹತ್ಯೆಮಾಡಲಾಗಿದೆ. ಅಲ್ಲದೆ ಒಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ಮಾಹಿತಿ ನೀಡಿದ್ದಾರೆ.
We had launched joint #operations at 4-5 locations yesterday night. Sofar 2 terrorists of JeM including 01 #Pakistani killed in #Pulwama, 1 terrorist of LeT killed each in #Ganderbal & #Handwara. Encounters over in Handwara & Pulwama. Also arrested 01 terrorist alive: IGP Kashmir
— Kashmir Zone Police (@KashmirPolice) March 12, 2022
ಪುಲ್ವಾಮದಲ್ಲಿ ಇಬ್ಬರು ಜೈಷ್ ಎ ಮೊಹಮದ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಹಂದ್ವಾರಾದ ರಾಜ್ವಾರ್ ಪ್ರದೇಶದ ನೇಚಮಾದಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಮತ್ತೊಂದು ಎನ್ಕೌಂಟರ್ ಗಂದೇರ್ಬಾಲ್ ಪ್ರದೇಶದಲ್ಲಿ ನಡೆದಿದೆ. ಲಷ್ಕರ್-ಏ-ತೊಯ್ಬಾ ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಹೊಡೆದುರುಳಿಸಿವೆ.








