ವಂಚಕನೊಂದಿಗೆ ಲಿಂಕ್ – ‘ಲಂಕಾ’ ಸುಂದರಿಗೆ ಕಂಟಕ : ಇಡಿ ವಿಚಾರಣೆಗೆ ಹಾಜರ್
ಮುಂಬೈ : ಬಾಲಿವುಡ್ ನ ಹಾಟ್ ಬ್ಯೂಟಿ ಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ.. ಆದ್ರೆ ಬೇಡದೇ ಇರೋ ವಿಚಾರಕ್ಕೆ.. ಅಂದ್ಹಾಗೆ ಜಾಕ್ವೆಲಿನ್ ಕೋಟಿ ಕೋಟಿ ವಂಚಿಸಿ ಕಂಬಿ ಹಿಂದೆ ಬಿದ್ದಿರುವ ವಂಚಕ ಸುಕೇಶ್ ಜೊತೆಗೆ ನಂಟು ಹೊಂದಿದ್ದು ಆತನಿಂದ ಕೋಟಿ ಕೋಟಿ ಮೌಲ್ಯದ ಗಿಫ್ಟ್ ಪಡೆದಿರೋದು ವಿಚಾರಣೆ ವೇಳೆ ತಿಳಿದುಬಂದಿದೆ..
ಹೀಗಾಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇಲೆ ಹಣ ಅಕ್ರಮ ವರ್ಗಾವಣೆ ಆರೋಪ ಇದೆ. ಇದೇ ವರ್ಷದ ಆರಂಭದಲ್ಲಿ ಸುಖೇಶ್ ಚಂದ್ರಶೇಖರ್ ಎಂಬಾತ ತಿಹಾರ್ ಜೈಲಿನಿಂದ ಉದ್ಯಮಿಯೊಬ್ಬರ ಪತ್ನಿಗೆ ಕರೆ ಮಾಡಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆ ಪ್ರಕರಣ ಬೆನ್ನತ್ತಿದ್ದ ಸಿಬಿಐ ಇದೊಂದು ಭಾರಿ ದೊಡ್ಡ ವಂಚನೆ ಜಾಲ ಎಂಬುದು ಪತ್ತೆಯಾಯಿತು. ನಂತರ ಇಡಿ ಈ ಸಹ ಈ ಪ್ರಕರಣದ ವಿಚಾರಣೆ ನಡೆಸಿತು. ಇಡಿ ವಿಚಾರಣೆಯಲ್ಲಿ ಸುಖೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್ ಆಪ್ತ ಸಂಬಂಧ ಹೊಂದಿರುವ ವಿಷಯ ಹೊರಗೆ ಬಿದ್ದಿದ್ದು, ಸುಖೇಶ್ ಚಂದ್ರಶೇಖರ್, ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಜಾಕ್ವೆಲಿನ್ ನೆರವು ನೀಡಿದ್ದಾರೆ ಎನ್ನಲಾಗುತ್ತಿದೆ.
ನಟಿ ಜಾಕ್ವೆಲಿನ್, ಆರೋಪಿ ಸುಖೇಶ್ಗೆ ಮುತ್ತು ಕೊಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಾಕ್ವೆಲಿನ್ ದೇಶ ಬಿಟ್ಟು ದುಬೈಗೆ ತೆರಳಲು ಮುಂದಾಗಿದ್ದರು. ಆದರೆ ಅವರನ್ನು ಏರ್ಪೋರ್ಟ್ನಲ್ಲಿ ತಡೆ ಹಿಡಿಯಲಾಯ್ತು. ಜಾಕ್ವೆಲಿನ್ ದೇಶ ಬಿಟ್ಟು ಹೊರಡಲು ಸಜ್ಜಾಗಿದ್ದ ಕಾರಣ ಅವರಿಗೆ ಇಡಿ ತ್ವರಿತ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಹ ಸೂಚಿಸಿತ್ತು. ಇದೀಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಅಲ್ಲದೇ ಜಾಕ್ವೆಲಿನ್ ತಾನು ಸಂತ್ರಸ್ತೆಯಾಗಿದ್ದು, ನನಗೆ ಸುಖೇಶ್ನ ವ್ಯವಹಾರಗಳ ಅರಿವಿಲ್ಲ, ನಾನು ಇಡಿಗೆ ಬೆಂಬಲ ನೀಡಿ ಅವರ ವಿಚಾರಣೆಗೆ ಸಹಕರಿಸುತ್ತೇನೆ ಎಂದಿರೋದಾಗಿ ತಿಳಿದುಬಂದಿದೆ..
ಇಂದು ಇಡಿ ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ರ ವಿಚಾರಣೆ ನಡೆಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಕೇಳಿದ ಪ್ರಶ್ನೆಗಳಿಗೆ ಜಾಕ್ವೆಲಿನ್ ಸರಿಯಾಗಿ ಉತ್ತರ ನೀಡದಿದ್ದರೆ ನಟಿಯ ಬಂಧನ ಆಗುವ ಸಾಧ್ಯತೆಗಳೂ ಇವೆ. ಸುಕೇಶ್ ರಿಂದ ಜಾಕ್ವೆಲಿನ್ ಸುಮಾರು 10 ಕೋಟಿ ಮೌಲ್ಯದ ಉಡುಗೊರೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. 59 ಲಕ್ಷ ರುಪಾಯಿ ಮೌಲ್ಯದ ಕುದುರೆ, ತಲಾ 9 ಲಕ್ಷ ಮೌಲ್ಯದ ಸುಮಾರು 4 ಪರ್ಶಿಯನ್ ಬೆಕ್ಕುಗಳ ಜೊತೆಗೆ ಇನ್ನೂ ಹಲವು ಉಡುಗರೆಗಳನ್ನ ತೆಗೆದುಕೊಂಡಿದ್ಧಾರೆ ಎನ್ನಲಾಗಿದೆ..
ಅಷ್ಟೇ ಅಲ್ಲ ಸುಕೇಶ್ ಬಾಲಿವುಡ್ ನ ಹಾಟ್ ಡ್ಯಾನ್ಸರ್ ನೋರಾ ಫತೇಹಿಗೂ ಒಂದು ಗಿಫ್ಟ್ ಕೊಡಿಸಿರುವುದು ಬೆಳಕಿಗೆ ಬಂದಿದೆ.. ನೋರಾ ಫತೇಹಿಗೆ ಈತ ಒಂದು ಬಿಎಂಡಬ್ಲು ಹಾಗೂ ಐಫೋನ್ ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದ್ದು ನೋರಾ , ಈ ಪ್ರಕರಣದಲ್ಲಿ ತಾನು ಸಂತ್ರಸ್ತೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ..