ವಿಕ್ರಾಂತ್ ರೋಣಾ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ED ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಗೆ ವಿಕ್ರಾಂತ್ ರೋಣದಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.. ರಾ… ರಾ… ರಕ್ಕಮ್ಮ ಸಾಂಗ್ , ಸ್ಟೆಪ್ಸ್ ಸಖತ್ ಫೇಮಸ್ ಕೂಡ ಆಗಿದೆ.. ಸಿನಿಮಾ ಥಿಯೇಟರ್ ಗಳಲ್ಲಿ ಭರ್ಜರಿ ಪ್ರದರ್ಶನ ಕಾಣ್ತಿದೆ..
ಈ ಪ್ರಕರಣದ ಪ್ರಮುಖ ಆರೋಪಿ ಸುಖೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್ಗೆ ಇಬ್ಬರೂ ಸಂಬಂಧದಲ್ಲಿದ್ದರು. ಅವರ ಅನೇಕ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ನಂತರ ಇ ಡಿ ಜಾಕ್ವೆಲಿನ್ ಅವರನ್ನ ವಿಚಾರಣೆಗೆ ಕರೆದಿತ್ತು. ಇವರಿಬ್ಬರ ಪೋಟೋಗಳನ್ನ E D ಸಾಕ್ಷಿಯಾಗಿರಿಸಿದೆ. ರಾನ್ಬಾಕ್ಸಿ ಮಾಜಿ ಪ್ರಮೋಟರ್ ಪತ್ನಿಯರಿಂದ ಸುಕೇಶ್ 200 ಕೋಟಿ ರೂ ವಸೂಲಿ ಮಾಡಿದ ಆರೋಪವಿದೆ.
ಆದ್ರೆ ಈ ಪ್ರಕರಣದಲ್ಲಿ ಜಾಕ್ವೆಲಿನ್ ಬಂಧನ ಸದ್ಯಕ್ಕೆ ಸಾಧ್ಯವಿಲ್ಲ, ಏಕೆಂದರೆ ಇಡಿ ಇನ್ನೂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿಲ್ಲ. ನ್ಯಾಯಾಲಯದ ವಿಚಾರಣೆಯ ನಂತರ ಬಂಧನವನ್ನು ಮಾಡಬಹುದು. ಆದರೆ, ಅವರನ್ನು ದೇಶದಿಂದ ಹೊರಗೆ ಹೋಗಲು ಇನ್ನೂ ಅನುಮತಿ ನೀಡಿಲ್ಲ.
ಅಂದ್ಹಾಗೆ ಜಾಕ್ವೆಲಿನ್ ಹಾಗೂ ಸುಕೇಶ್ ಭೇಟಿಯಾಗಿದ್ದೇ ಕೇವಲ 2 ಬಾರಿ ಎನ್ನಲಾಗ್ತಿದೆ.. ಸುಕೇಶ್ ಚಂದ್ರಶೇಖರ್ ತಾವು ತಮಿಳಿನ ಖಾಸಗಿ ವಾಹಿನಿಯೊಂದರ ಮಾಲೀಕ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಅಳಿಯ ಅಂತಲೂ ಹೇಳಿಕೊಂಡಿದ್ದಾರೆ ಎಂದು ಜಾಕ್ವೇಲಿನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ಫೆಬ್ರವರಿ 2021ರ ವೇಳೆ ತಮ್ಮಿಬ್ಬರ ಪರಿಚಯವಾಗಿ ಆಗಸ್ಟ್ 2021ರವರೆಗೆ ಮಾತ್ರ ತಾವಿಬ್ಬರೂ ಫೋನ್ ಸಂಪರ್ಕದಲ್ಲಿ ಇದ್ದೆವು ಅಂದಿದ್ದಾರೆ. ಅಲ್ಲದೇ, ಎರಡು ಬಾರಿ ಚೆನ್ನೈನಲ್ಲಿ ತಾವಿಬ್ಬರೂ ಭೇಟಿ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ಇನ್ನೂ ಇಬ್ಬರ ಸ್ನೇಹ ಕೇವಲ ಎಂಟು ತಿಂಗಳ ಕಾಲವಿತ್ತು.. ಎರಡು ಬಾರಿ ಅಷ್ಟೇ ಭೇಟಿ ಮಾಡಿದ್ದು. ಈ ವೇಳೆಯಲ್ಲಿ ಸುಕೇಶ್ ಅವರು ದುಬಾರಿ ಕಾರು, ಡೈಮೆಂಡ್ ನಕ್ಲೆಸ್, ಕಾಸ್ಟ್ಲಿ ಬ್ಯಾಗ್ಸ್, ವಿದೇಶ ಪ್ರಯಾಣ, ಒಂದು ಕುದುರೆ ಹೀಗೆ ಜಾಕ್ವೇಲಿನ್ ಗೆ ಕೋಟ್ಯಾಂತರ ರೂಪಾಯಿ ಗಿಫ್ಟ್ ಕೊಡಿಸಿರೋದಾಗಿ ಜಾಕ್ವೆಲಿನ್ ಅಧಿಕಾರಿಗಳೆದುರು ಹೇಳಿಕೊಂಡಿದ್ದಾರೆ..