ಸುಕೇಶ್ ಜೊತೆಗಿನ ಲವ್ ಬೈಟ್ ಫೋಟೋ ಬಗ್ಗೆ ಲಂಕಾ ಸುಂದರಿ ಹೇಳಿದ್ದು ಹೀಗೆ..!!
ಶ್ರೀಲಂಕಾದ ಹಾಟ್ ಬ್ಯೂಟಿ , ಬಾಲಿವುಡ್ ನ ಗ್ಲಾಮರಸ್ ಗೊಂಬೆ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ಕೆಲ ದಿನಗಳಿಂದ ವಂಚಕ ಸುಕೇಶ್ ಜೊತೆಗೆ ತಳುಕುಹಾಕಿಕೊಂಡಿದೆ.. ಅವರಿಬ್ಬರ ನಡುವೆ ಸಂಬಂಧವಿದೆ ಎಂದುಕ್ಕೆ ಪೂರಕವಾಗಿ ಅವರ ಅತಿ ಆಪ್ತ ಫೋಟೋಗಳು ವೈರಲ್ ಆಗ್ತಿವೆ.. ಜೊತೆಗೆ ಜಾಕ್ವೆಲಿನ್ ಗೆ ಕೋಟಿ ಕೋಟಿ ಮೌಲ್ಯದ ಗಿಫ್ಟ್ ಗಳನ್ನ ವಂಚಕ ಸುಕೇಶ್ ನೀಡಿರೋದಾಗಿ ಬಾಯ್ಬಿಟ್ಟಿದ್ದಾನೆ.. ಅಲ್ಲದೇ ಜಾಕ್ವೆಲಿನ ಈ ಸಂಬಂಧ ಇಡಿ ವಿಚಾರಣೆಗೂ ಹಾಜರಾಗಿದ್ರು.. ಹೀಗಿರೋವಾಗ್ಲೇ ಸುಕೇಶ್ ಜೊತೆಗಿನ ಮತ್ತೊಂದು ಆಪ್ತ ಫೋಟೋ ವೈರಲ್ ಆಗಿದೆ.. ಈ ಫೋಟೋದಲ್ಲಿ ಸುಕೇಶ್ ಜಾಕ್ವೆಲಿನ್ ಮೂಗಿಗೆ ಮುತ್ತಿಡುತ್ತಿದ್ದಾರೆ.. ಜಾಕ್ವೆಲಿನ ಕೂಡ ಇದನ್ನ ವಿರೋಧಿಸಿಲ್ಲ.. ಬದಲಾಗಿ ಪ್ರೀತಿಯಿಂದ ನಗುತ್ತಾ ಕಣ್ಣುಮುಚ್ಚಿದ್ದಾರೆ.
ಈ ಬಗ್ಗೆ ಜಾಕ್ವೆಲಿನ್ ಮೌನ ಮುರಿದಿದ್ದು ಸೋಷಿಯಲ್ ಮೀಡಿಯಾಲ್ಲೊಂದು ಪತ್ರ ಬರೆದಿದ್ದಾರೆ.. ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ತೋರಿದ್ದಾರೆ. ಇದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೂ ಇದು ಅರ್ಥವಾಗುತ್ತದೆ ಎಂದು ಕೊಂಡಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆ ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಧನ್ಯವಾದಗಳು ಎಂದು ಜಾಕ್ವೆಲಿನ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಇವರಿಬ್ಬರ ಮಧ್ಯೆ ಸಂಬಂಧವಿರುವುದು ಪಕ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಸುಕೇಶ್ ಚಂದ್ರಶೇಖರ್‌ನನ್ನು ಬಂಧಿಸಿದೆ.
ಸುಕೇಶ್ ಬಂಧನವಾಗುವ ತನಕವೂ ಜಾಕ್ವೆಲಿನ್ ಮತ್ತು ಸುಕೇಶ್ ಸಂಪರ್ಕದಲ್ಲಿ ಇದ್ದರು. ಜಾಕ್ವೆಲಿನ್‍ಗೆ ಉಡುಗೊರೆಯಾಗಿ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಅನ್ನು ಸುಕೇಶ್ ನೀಡಿದ್ದ ಎಂದು ಇಡಿ ಬಹಿರಂಗ ಪಡಿಸಿತ್ತು.. ಈ ಕುರಿತು ಪ್ರತಿಕ್ರಿಯಿಸಿದ ಸುಕೇಶ್, ನಾನು ಜಾಕ್ವೆಲಿನ್ ನೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ. ಅದಕ್ಕಾಗಿಯೇ ನಾನು ಅವರಿಗೆ ಉಡುಗೊರೆಗಳನ್ನು ನೀಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ. ಈ ಪ್ರಕರಣಕ್ಕೂ ಆಕೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು..








