ಮಾಸ್ ಅವತಾರದಲ್ಲಿ ಪುಷ್ಪ ಡೈಲಾಗ್ ಹೊಡೆದ ಜಡ್ಡು Jaddu saaksha tv
ಇತ್ತೀಚೆಗೆ ಕ್ರಿಕೆಟಿಗರು ರೀಲ್ಸ್ ಮಾಡೋದು ಫ್ಯಾಷನ್ ಆಗಿಬಿಟ್ಟಿದೆ. ಈ ವಿಷಯದಲ್ಲಿ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಒಂದು ಹೆಜ್ಜೆ ಮುಂದಿದ್ದರೇ, ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ರೀಲ್ಸ್ ಮಾಡುತ್ತಾ ಮಿಂಚುತ್ತಿರುತ್ತಾರೆ.
ಅದರಂತೆ ಇದೀಗ ಟೀಂಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಟ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ.
ಪುಷ್ಪ, ಪುಷ್ಪರಾಜ್.. ದೀನೇಬ್ಬ ತಗ್ಗೇದೆಲೇ ಎಂದು ರವೀಂದ್ರ ಜಡೇಜಾ ಅಲ್ಲು ಡೈಲಾಗ್ ಹೊಡೆದಿದ್ದಾರೆ.
ವಿಶೇಷವೆಂದರೇ ಜಡ್ಡು ಅಲ್ಲು ಅರ್ಜುನ್ ರಂತೆ ಮಾಸ್ ಅವತಾರದಲ್ಲಿ ಈ ಡೈಲಾಗ್ ಹೊಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.









