Jadeja | ಟೆಸ್ಟ್ ನಲ್ಲಿ ಅಪರೂಪದ ಸಾಧನೆ.. ಕಪಿಲ್, ಧೋನಿ ಸಾಲಿಗೆ ಜಡ್ಡು
ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದು ಜಡೇಜಾ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ಶತಕಗಳನ್ನು ಗಳಿಸಿದ ನಾಲ್ಕನೇ ಭಾರತೀಯ ಆಟಗಾರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವ ಜಡೇಜಾ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ 104 ರನ್‌ಗಳೊಂದಿಗೆ ನಿರ್ಣಾಯಕ ಇನ್ನಿಂಗ್ಸ್ ಆಡಿದ್ರು.

ಈ ಪಂದ್ಯದ ವಿಚಾರಕ್ಕೆ ಬಂದರೆ… ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 416 ರನ್ ಗಳಿಗೆ ಆಲೌಟ್ ಆಗಿದೆ.
ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ರಿಷಬ್ ಪಂತ್ (146) ಮತ್ತು ಜಡೇಜಾ (104) ರನ್ ಸಿಡಿಸಿ ಮಿಂಚಿದ್ದಾರೆ.
ಈ ಅಪರೂಪದ ಸಾಧನೆ ಮಾಡಿದ ಭಾರತದ ಆಟಗಾರರು ಇವರೇ
ಕಪಿಲ್ ದೇವ್-1986
ಎಂಎಸ್ ಧೋನಿ-2009
ಹರ್ಭಜನ್ ಸಿಂಗ್-2010
ರವೀಂದ್ರ ಜಡೇಜಾ-2022








