ಯಾರ್ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಅದು ಆಗುತ್ತೆ : ಸಿಎಂ ಬದಲಾವಣೆ ಕುರಿತು ಶೆಟ್ಟರ್ ಮಾತು
ಹುಬ್ಬಳ್ಳಿ : ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಅಂತಾ ಬೋರ್ಡ್ ಹಾಕಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ.ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ.
ಯಾರ್ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಅದು ಆಗೇ ಆಗುತ್ತೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಸಿಎಂ ಬದಲಾವಣೆ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಇನ್ಮುಂದೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಅಂತಾ ಬೋರ್ಡ್ ಹಾಕಿಕೊಂಡು ಅಡ್ಡಾಡುವ ಪರಿಸ್ಥಿತಿ ಬಂದಿದೆ ಎಂದರು.
ಇನ್ನು ಅರವಿಂದ ಬೆಲ್ಲದ್ ಮುಂದಿನ ಸಿಎಂ ವಿಚಾರ ಈ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆಯಾಗಿದೆ.
ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ. ಯಾರ್ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಅದು ಆಗೇ ಆಗುತ್ತೆ ಎಂದರು.
ಅಲ್ಲದೆ ನಾಳೆಯಿಂದ ಉಚಿತ ಲಸಿಕಾ ಮೇಳ ಆರಂಭವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದ ಕೊರೊನಾ ವ್ಯಾಕ್ಸಿನ್ ಹಾಕಲಿದ್ದೇವೆ.
ಜಿಲ್ಲೆಯ 201 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಿದ್ದು, ಕೋವಿಶೀಲ್ಡ್ 38,020 ಹಾಗೂ ಕೋವ್ಯಾಕ್ಸಿನ್ 12,460 ಲಸಿಕೆ ಲಭ್ಯವಿದೆ ಎಂದು ಇದೇ ವೇಳೆ ತಿಳಿಸಿದ್ರು.