ವಿಸ್ಟ್ರಾನ್ ಕಂಪನಿ ಪುನರಾಂರಂಭ : ಕಂಪನಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ
ಕೋಲಾರ : ಸಂಬಳ ಕೊಡದಕ್ಕೆ ಕೋಲಾರದ ವಿಸ್ಟ್ರಾನ್ ಕಂಪನಿ ಮೇಲೆ ಕಾರ್ಮಿಕರಿಂದ ದಾಂಧಲೆ ಪ್ರಕರಣದಿಂದಾಗಿ ಸ್ಥಗಿತಗೊಂಡಿದ್ದ ಕಾರ್ಖಾನೆ ಇದೀಗ ಮತ್ತೆ ಪುನರಾಂರಂಭಕ್ಕೆ ಸಿದ್ಧತೆಗಳನ್ನ ನಡೆಸಿಕೊಂಡಿದೆ. ವಿಸ್ಟ್ರಾನ್ ಕಂಪನಿಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ವಿಸ್ಟ್ರಾನ್ ಮತ್ತೆ ಕಾರ್ಯಾರಂಭ ಮಾಡುವ ಹಿನ್ನೆಲೆ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಕಂಪನಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಪುನರಾರಂಭದ ಬಗ್ಗೆ, ಸಿದ್ಧತೆಗಳ ಬಗ್ಗೆ ಪರಿಸೀಳಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಶೆಟ್ಟರ್ ಗೆ ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ ಕಾರ್ತಿಕ್ ರೆಡ್ಡಿ ಸಾಥ್ ನೀಡಿದ್ದರು.








