ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ನೀಡಬೇಕೆಂದು ಒತ್ತಾಯಿಸಿದ್ದೇನೆ : ಜಗದೀಶ್ ಶೆಟ್ಟರ್ chitradurga
ಚಿತ್ರದುರ್ಗ : ಆಕ್ಸಿಜನ್, ರೆಮ್ಡಿಸಿವರ್ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಎಲ್ಲವೂ ಸರಿ ಹೋಗುವ ನಂಬಿಕೆ ನನಗೆ ಇದೆ ಎಂದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ.
ಇದರಿಂದ ನಾನು ರಾಜ್ಯದಲ್ಲಿ ಓಡಾಡುತ್ತಿದ್ದೇನೆ. ನಿನ್ನೆ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಹಾಗೂ ಪ್ರಹ್ಲಾದ ಜೋಷಿ ಜೊತೆ ಚರ್ಚಿಸಿದ್ದೇನೆ.
ನಮ್ಮ ರಾಜ್ಯಕ್ಕೆ ಹೆಚ್ಚು ಆಕ್ಸಿಜನ್ ನೀಡಬೇಕು ಎಂದು ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.
ಇನ್ನು ಚಿತ್ರದುರ್ಗಕ್ಕೆ ಹೆಚ್ಚಿನ ಆಕ್ಸಿಜನ್ ಕುರಿತು ಮನವಿ ಮಾಡಿದ್ದಾರೆ. ರಾಜ್ಯ ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿ ಜಿಲ್ಲೆಗೆ ತೊಂದರೆ ಆಗದಂತೆ ಮಾಡುತ್ತೇನೆ.
ಜಿಲ್ಲಾಸ್ಪತ್ರೆ ಸೇರಿ ಯಾವುದೇ ಕಡೆ ಯಾರಿಗು ತೊಂದರೆ ಆಗಬಾರದು ಎಂದು ಡಿಸಿಗೆ ಸೂಚನೆ ನೀಡಿದ್ದೇನೆ. ಕೇಂದ್ರ ಸರ್ಕಾರವು ಕೂಡ ಆಕ್ಸಿಜನ್ ಕೊರತೆ ಕುರಿತು ನಿರ್ಧಾರ ಮಾಡುತ್ತದೆ ಎಂದು ಹೇಳಿದರು.