ಸ್ಯಾಂಡಲ್ ವುಡ್ ದಿಗ್ಗಜರಾದ ಅಂಬರೀಷ್ ಅವರು ನಿಧರಾದ ಬಳಿಕ ಕನ್ನಡ ಚಿತ್ರರಂಗದ ಜವಾಬ್ದಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹೆಗಲಿಗೆ ಬಿದ್ದಿದೆ. ಈ ಬಗ್ಗೆ ಕಲಾವಿದರ, ನಿರ್ಮಾಪಕರು , ನಿರ್ದೇಶಕರು, ವಿತಕರೆಲ್ಲರೂ ಒಗ್ಗೂಡಿ ಶಿವಣ್ಣನ ಮನೆಯಲ್ಲಿ ಚರ್ಚೆ ನಡೆಸಿ ಚಂದನವನದ ಜವಾಬ್ದಾರಿ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಮಡಿದ್ದರು. ಅದ್ರಂತೆ ಶಿವಣ್ಣ ಚಿತ್ರರಂಗದ ನಾಯಕತ್ವವನ್ನೂ ವಹಿಸಿಕೊಂಡಿದ್ದಾರೆ. ಆದರೆ ಈ ಸಭೆಯಲ್ಲಿ ರವಿಚಂದ್ರನ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ರಮೇಶ್ ಅರವಿಂದ್, ಗಣೇಶ್, ಯಶ್, ದುನಿಯಾ ವಿಜಿ ಮತ್ತು ರಕ್ಷಿತ್ ಶೆಟ್ಟಿ ಸೇರಿದ್ದಂತೆ ಅನೇಕ ಕಲಾವಿದರು ಭಾಗಿಯಾಗಿದ್ದರೂ, ನವರಸ ನಾಯಕ ಜಗ್ಗೇಶ್ ಅವರ ಗೈರು ಎದ್ದು ಕಾಣುತ್ತಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೂ ಎಡೆ ಮಾಡಿಕೊಟ್ಟಿತ್ತು. ಆದ್ರೀಗ ಗೈರಾದ ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜಗ್ಗೇಶ್ ಅವರು ಎಲ್ಲಾ ಚರ್ಚೆಗಳಿಗೂ ಅಲ್ಪವಿರಾಮವಿಟ್ಟಿದ್ದಾರೆ. 
“ಯಾವುದೆ ಕಾರಣಕ್ಕೂ ಕೊರೊನಾ ಔಷದ ಬರುವವರೆಗೂ ಎಲ್ಲಿಯೂ ಹೋಗುವುದಿಲ್ಲ. ಯಾರ ಭೇಟಿಯು ಮಾಡುವುದಿಲ್ಲ. ಶಿವಣ್ಣ ಪಾಪ ಕರೆದರು ನಾನೆ ಬರುವುದಿಲ್ಲ ಎಂದು ತಿಳಿಸಿದೆ. ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ. ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರು ಔಟಿಟiಟಿe ಚರ್ಚೆ ನಡೆಯುತ್ತಿದೆ. ನೀವು ಕ್ಷೇಮವಾಗಿರಿ ಧನ್ಯವಾದ.” ಎಂದು ಹೇಳುವ ಮೂಲಕ ಸಬೆಗೆ ಗೈರಾದ ಅಸಲಿ ಕಾರಣವನ್ನು ಬಿಚ್ಚಿಟ್ಟಿದಾರೆ.
ಈ ಒಂದು ಕೆಲಸ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಅದೃಷ್ಟದ ಲಕ್ಷ್ಮಿ ನಿಮ್ಮ ಮನೆ ಬಾಗಿಲನ್ನ ತಟ್ಟುತ್ತಾಳೆ …
ಕೆಲವೊಬ್ಬರ ಮನೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಆಕಸ್ಮಿಕವಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿಹೋಗುತ್ತದೆ. ಇಷ್ಟೇ ಅಲ್ಲದೆ ಕೆಲವೊಂದು ಬಾರಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತಮ್ಮದೇ ಮನೆಯಲ್ಲಿ...








