5 ಭಾಷೆಗಳಲ್ಲಿ ರಿಲೀಸ್ ಆಗುತ್ತಂತೆ “ತೋತಾಪುರಿ” : ಆದ್ರೂ ಪ್ಯಾನ್ ಇಂಡಿಯಾ ಅಲ್ವಂತೆ..!
ಕನ್ನಡ , ತಮಿಳು , ತೆಲುಗು , ಮಳಯಾಳಂ ಎಲ್ಲಾ ಭಾಷೆ ಸಿನಿಮಾಗಳು ಒಟ್ಟಾರೆಯಾಗಿ ಸೌತ್ ಸಿನಿಮಾ ಇಡಂಸ್ಟ್ರಿ ಈಗ ಸಖತ್ ಸ್ಟ್ರಾಂಗ್ ಆಗಿ ಬಾಲಿವುಡ್ ಗೆ ಟಕ್ಕರ್ ಕೊಡ್ತಿದೆ.. ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮಾಡುತ್ತಾ ಬಾಲಿವುಡ್ ಸೌತ್ ಮುಂದೆ ನಿಲ್ ಅನ್ನೋದನ್ನ ಈಗಾಗಲೇ ಕೆಜಿಎಫ್ , ಬಾಹುಬಲಿ ಸಿನಿಮಾಗಳು ಪ್ರೂವ್ ಮಾಡಿವೆ.. ಅದ್ರಲ್ಲೂ ಇತ್ತೀಚೆಗೆ ರಿಲೀಸ್ ಆದ ಜೈ ಭೀಮ್ ಸೌತ್ ಸಿನಿಮಾ ಇಂಡಸ್ಟ್ರಿ ಕೇವಲ ಕಮರ್ಷಿಯಲ್ ಕಡೆ ಗಮನ ಕೊಡದೇ , ರೋಟೀನ್ ಆಗಿ ಆಕ್ಷನ್ ಸೀನ್ಸ್ , ಹಾಡು ಇದೆಲ್ಲದನ್ನ ಮೀರಿ ಸಮಾಜದ ಕರಾಳಮುಖವನ್ನ ಬಿಚ್ಚಿಟ್ಟು ಇಡೀ ದೇಶಾದ್ಯಂತ ಜನ ಮೆಚ್ಚುಗೆಗೆ ಪಾತ್ರವಾಗಿದೆ..
ಇನ್ನೂ ಒಂದ್ ಕಾಲದಲ್ಲಿ ಕನ್ನಡ ಸಿನಿಮಾಗಳು , ಸೌತ್ ಸಿನಿಮಾಗಳು ಅಂದ್ರೆ ತಾತ್ಸಾರ ಮಾಡ್ತಿದ್ದ ಬಾಲಿವುಡ್ ನವರ ಕಣ್ಣು ಇದೀಗ ಬರೀ ನಮ್ಮ ಸಿನಿಮಾಗಳತ್ತ ನೆಟ್ಟಿದೆ.. ಇನ್ನೂ ಎಲ್ಲರೂ ಕೂಡ ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡೋಕೆ ಮುಂದಾಗಿರೋದು ನಿಜಕ್ಕೂ ಖುಷಿಯ ವಿಚಾರ. ಇದೀಗ ನವರಸ ನಾಯಕ ಜಗ್ಗೇಶ್ ನಟನೆಯ “ತೋತಾಪುರಿ” ಸಿನಿಮಾ ಕನ್ನಡ , ತೆಲುಗು , ತಮಿಳು , ಹಿಂದಿ , ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆದ್ರೂ ಕೂಡ ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ವಂತೆ..
ನೀರ್ ದೋಸೆ ಸಿನಿಮಾ ಹಿಟ್ ಆದ ನಂತರದಲ್ಲಿ ವಿಜಯ್ ಪ್ರಸಾದ್ ತೋತಾಪುರಿ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೀಗ ಚಿತ್ರತಂಡ ಸಿನಿಮಾ 5 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದೆ. ಇದರ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಜಗ್ಗೇಶ್ ಮುಖ್ಯಭೂಮಿಕೆಯ ತೋತಾಪುರಿ ಸಿನಿಮಾ ಈಗಾಗಲೇ ಚಿತ್ರೀಕರಣ ಕಂಪ್ಲೀಟ್ ಮಾಡಿ ಥಿಯೇಟರ್ ಗೆ ಪ್ರವೇಶ ಪಡೆಯಲು ಸಜ್ಜಾಗಿದೆ. ಆದ್ರೆ ಪೋಸ್ಟರ್ ರಿಲೀಸ್ ಮಾಡಿ ಜನರ ತಲೆಗೆ ಹುಳ ಬಿಟ್ಟಿದೆ ಸಿನಿಮಾತಂಡ. ಹೌದು ಪೋಸ್ಟರ್ ನಲ್ಲಿ “ದೇವ್ರಾಣೆಗು ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲಾ,ನಮ್ದು ಬರೀ ಸಿನಿಮಾ. ದೃಷ್ಟಿ ಬಿದ್ರು ಪರ್ವಾಗಿಲ್ಲ ಆದ್ರೆ ವಕ್ರ ದೃಷ್ಠಿ ಬೀಳ್ದೇ ಇರ್ಲಿ” ಎಂದು ಸಿನಿಮಾ ತಂಡ ಹೇಳಿಕೊಂಡಿದೆ..
ಈ ಹಿಂದೆ ಜಗ್ಗೇಶ್ ಅವರು ಪ್ಯಾನ್ ಇಂಡಿಯಾ ಸಿನಿಮಾಗಳ ವಿರುದ್ಧ ಗರಂ ಆಗಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಕನ್ನಡಿಗರಿಗೆ ವರ್ಕ್ ಔಟ್ ಆಗಲ್ಲ ಎಂದಿದ್ದರು.. ಆದ್ರೆ ಈಗ ಅವರ ನಟನೆಯ ಸಿನಿಮಾ 5 ಭಾಷೆಗಳಲ್ಲಿ ಬರುತ್ತಿದೆ. ಇನ್ನೂ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಿದೆ. ಈ ಸಿನಿಮಾ ಕೂಡ ಎರಡು ಭಾಗಗಳ ಸರಣಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಸಿನಿಮಾದಲ್ಲಿ ಸುಮನ್ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎ ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.