ಬೆಂಗಳೂರು: ಡ್ರಗ್ಸ್ ಜಾಲದ ನಂಟಿನ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಡ್ರಗ್ಗಿಣಿಯರಾದ ರಾಗಿಣಿ ಹಾಗೂ ಸಂಜನಾಗೆ ಸೋಮವಾರದವರೆಗೆ ಜೈಲೂಟ ಖಾಯಂ ಆಗಿದೆ.
ಇಂದು ಬೆಂಗಳೂರಿನ ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ರಾಗಿಣಿ, ಸಂಜನಾ, ಶಿವಪ್ರಕಾಶ್ ಸೇರಿ 5 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಆದರೆ, ಆರೋಪಿಗಳ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಎಲ್ಲಾ ಆರೋಪಿಗಳ ಜಾಮೀನು ಅರ್ಜಿಗಳಿಗೂ ಪ್ರತ್ಯೇಕವಾಗಿ ಆಕ್ಷೇಪಣೆ ಸಲ್ಲಿಸಬೇಕಿದೆ ಎಂದು ಸಿಸಿಬಿ ಪರ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಡ್ರಗ್ಸ್ ಕೇಸಲ್ಲಿ ಇನ್ನೂ ಕೆಲವರ ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ. ತನಿಖಾಧಿಕಾರಿಗಳಿಂದ ಇನ್ನಷ್ಟು ವರದಿ ಬರಬೇಕಿದೆ. ಇನ್ನೂ ಕೆಲವರಿಗೆ ನೋಟಿಸ್ ನೀಡಬೇಕಿದೆ. ಕೆಲವೊಂದು ವರದಿಗಾಗಿ ಕಾಯುತ್ತಿದ್ದೇವೆ, ವರದಿ ಬಂದ ನಂತರ ಆಕ್ಷೇಪಣೆ ಸಲ್ಲಿಕೆ ಮಾಡಲಾಗುವುದು ಎಂದು ಸಿಸಿಬಿ ಪರ ವಕೀಲರು ಕೋರ್ಟ್‍ಗೆ ಮನವರಿಕೆ ಮಾಡಿದರು.
ಈ ಹಿನ್ನೆಲೆಯಲ್ಲಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರಕ್ಕೆ ಮುಂದೂಡಿದ್ದಾರೆ. ಹೀಗಾಗಿ ಇಬ್ಬರೂ ನಟಿಯರಿಗೆ ಸೋಮವಾರದವರೆಗೂ ಪರಪ್ಪನ ಅಗ್ರಹಾರ ಜೈಲುವಾಸ ಖಾಯಂ ಆಗಿದೆ.
ಚಂದನವನದ ಅಜರಾಮರ ಪ್ರೇಮಕಾವ್ಯಕ್ಕೆ ಮತ್ತೆ ಜೀವ: ರವಿ-ಹಂಸ ಜೋಡಿಯ ಐತಿಹಾಸಿಕ ಕ್ರೇಜಿ ಬ್ರಹ್ಮ ಮಹಾಸಂಗಮಕ್ಕೆ ಮುಹೂರ್ತ ಫಿಕ್ಸ್!
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರುಗಳೆಂದರೆ ಅದು ಈಶ್ವರಿಯ ರವಿಚಂದ್ರನ್ ಮತ್ತು ನಾದಬ್ರಹ್ಮ ಹಂಸಲೇಖ. ಪ್ರೇಮಲೋಕದ ಮೂಲಕ ಕನ್ನಡಿಗರ ಎದೆಯಲ್ಲಿ ಪ್ರೇಮದ ಪರಾಕಾಷ್ಠೆಯನ್ನು ಬಿತ್ತಿದ...








