ಹುಬ್ಬಳ್ಳಿ: ಸಮೀಪದ ವರೂರಿನ ನವಗ್ರಹ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ (Mahamastakabhisheka) ಕಾರ್ಯಕ್ರಮದ ವೇದಿಕೆ ಮೇಲೆ ಡಿ.ಕೆ. ಶಿವಕುಮಾರ್ ಸಿಎಂ (Chief Minister) ಆಗುತ್ತಾರೆ ಎಂದು ಜೈನಮುನಿ (Jain sage) ಗುಣಧರನಂದಿ ಮಹಾರಾಜ್ (Gunadharanandi Maharaj)ಆಶೀರ್ವಾದ ಮಾಡಿದ್ದಾರೆ.
ಜೈನರಿಗೆ ನಿಗಮ ಮಂಡಳಿ ಆಗಬೇಕು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು.ಇದು ನಮ್ಮ ಭವಿಷ್ಯ ಹಾಗೂ ಆಶೀರ್ವಾದ ಎಂದಿದ್ದಾರೆ. ಇದಕ್ಕೆ ಮಾರ್ಮಿಕವಾಗಿ ಡಿಕೆಶಿ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹೀಗಾಗಿ ಅವರು ಸಿಎಂ ಆಗಲಿ ಎಂದು ಸ್ವಾಮೀಜಿ ಹೇಳಿದರು.
ನಿಗಮ ಮಂಡಳಿ ಫೈಲ್ ಸತ್ತಿಲ್ಲ, ಜೀವಂತ ಇದೆ. ಈಗ ನಿಗಮ ಮಂಡಳಿ ಬೇಡುತ್ತಿದ್ದೇವೆ. ನಮಗೆ ನಿಗಮ ಮಂಡಳಿ ಕೊಡಿ ಅಂತ ಜೈನ ಮುನಿ ಗುಣಧರನಂದಿ ಮಹಾರಾಜ ಮನವಿ ಕೂಡ ಮಾಡಿದರು. ಆನಂತರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಹೊಡಿತಾ ಇರುತ್ತಾರೆ. ಹಿಂದೆ ವಿನಯ್ ಗುರೂಜಿ ಈ ಮಾತು ಹೇಳಿದ್ದರು. ಈಗ ನೀವು ಹೇಳುತ್ತಿದ್ದೀರಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.








