ಜೋಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಸಮುದಾಯದ ಹಿತಾಸಕ್ತಿಗಾಗಿ ಶ್ರಮಿಸುತ್ತಿದ್ದ ಸ್ಥಳೀಯ ರಾಜಕಾರಣಿ ಜಯರಾಜ್ ಬಚು ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ಯುನೈಟೆಡ್ ಮೂವ್ ಮೆಂಟ್ (ಹಮ್) ಎಂಬ ಏಕೈಕ ಹಿಂದೂ ಪಕ್ಷವನ್ನು ಸ್ಥಾಪಿಸಿದ್ದ ಜಯರಾತ್ ಸಮುದಾಯ ಮತ್ತು ಪೊಲಿಟಿಕಲ್ ಪಾರ್ಟಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜಯರಾಕ್ ಬಚು ಅವರಿಗೆ ಒಂದು ವಾರದ ಹಿಂದೆ ಕೊರೊನಾ ಸೋಂಕಿರೋದು ದೃಢಪಟ್ಟಿತ್ತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದ್ರೆ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಜಯರಾಜ್ ಅವರು ಮೃತಪಟ್ಟಿದ್ದರು. ಶನಿವಾರ ಅವರ ಅಂತ್ಯಸಂಸ್ಕಾರ ನೆರವೇರಿದೆ ಎಂದು ಅವರ ಪುತ್ರ ಉಮೇಶ್ ಬಚು ತಿಳಿಸಿದ್ದಾರೆ.








