jallikattu film
ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟ ‘ಜಲ್ಲಿಕಟ್ಟು’ : ಚಿತ್ರತಂಡಕ್ಕೆ ಶುಭಕೋರಿದ ಕಂಗನಾ ಹೇಳಿದ್ದೇನು ಗೊತ್ತಾ..!
ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಗೆ ಮಳಯಾಳಂ ನ ‘ಜಲ್ಲಿಕಟ್ಟು’ ಸಿನಿಮಾ ಆಯ್ಕೆಯಾಗಿದೆ. 2021ರ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಪ್ರವೇಶ ಪಡೆದ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಸಮಾಜಕ್ಕೆ ಒಂದು ಉತ್ತಮ ಮೆಸೇಜ್ ಕೊಡಲಾಗಿದೆ. ಹೀಗಾಗಿ ಸಿನಿಮಾ ಆಸ್ಕರ್ ಗೆ ಆಯ್ಕೆಯಾಗಿದೆ. ಇತ್ತ ಆಸ್ಕರ್ ಗೆ ಆಯ್ಕೆಯಾಗಿರುವ ‘ಜಲ್ಲಿಕಟ್ಟು’ ತಂಡಕ್ಕೆ ಅನೇಕ ಸಿನಿ ತಾರೆಯರು ವಿಶ್ ಮಾಡ್ತಾಯಿದ್ದಾರೆ. ಅದ್ರಂತೆ ಬಾಲಿವುಡ್ ನ ‘ಕ್ವೀನ್’ ಕಂಗನಾ ರಣಾವತ್ ಸಹ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಆಕ್ಷನ್ ಫಿನ್ಸ್ ‘ಪೊಗರು’ ಹಿಂದಿ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟ..!
ಅಂದ್ಹಾಗೆ ಲಿಜೊ ಜೋಸ್ ಸಾರಥ್ಯದಲ್ಲಿ ಮೂಡಿಬಂದಿರುವ ‘ಜಲ್ಲಿಕಟ್ಟು’ ಚಿತ್ರ ಆಸ್ಕರ್ ಪ್ರಶಸ್ತಿಯ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿದೆ. ಇನ್ನೂ ಬಾಲಿವುಡ್ ಸಿನಿಮಾ ಹೊರತುಪಡಿಸಿ ಪ್ರಾದೇಶಿಕ ಭಾಷೆಯ ಚಿತ್ರವೊಂದು ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ‘ಭಾರಿ ವಿರೋಧದ ಬಳಿಕ ಅಂತಿಮವಾಗಿ ಕೆಲವು ಫಲಿತಾಂಶ ಸಿಕ್ಕಿದೆ. ಭಾರತೀಯ ಸಿನಿಮಾಗಳು ಕೇವಲ 4 ಚಲನಚಿತ್ರ ಕುಟುಂಬಗಳಲ್ಲ. ಸಿನಿಮಾ ಮಾಫಿಯಾ ಗ್ಯಾಂಗ್ ತಮ್ಮ ಮನೆಯಲ್ಲಿ ಅಡಗಿಕೊಂಡಿದೆ. ಆಯ್ಕೆದಾರರು ತಮ್ಮ ಕೆಲಸವನ್ನು ಉತ್ತಮವಾಗಿ ಮಾಡಿದ್ದಾರೆ. ಜಲ್ಲಿಕಟ್ಟು ತಂಡಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ಇನ್ನು ಶಂಕುತಲಾ ದೇವಿ, ಚಪಾಕ್, ಗುಲಾಬೊ ಸಿತಾಬೊ, ಚಲಾಂಗ್ ಸೇರಿದಂತೆ ಇನ್ನು 27 ಸಿನಿಮಾಗಳ ನಡುವೆ ಸ್ಪರ್ಧೆ ನಡೆಸಿ ಜಲ್ಲಿಕಟ್ಟು ಆಸ್ಕರ್ ಅಂಗಳಕ್ಕೆ ಲಗ್ಗೆ ಇಟ್ಟಿದೆ.
jallikattu film
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








