ಭಾರತದ ‘ಜಲ್ಲಿಕಟ್ಟು’ – ‘ಆಸ್ಕರ್’ ರೇಸ್ ನಿಂದ ಔಟ್..!
ಮಲಯಾಳಂ ನ ‘ಜಲ್ಲಿಕಟ್ಟು’ ಭಾರತದಿಂದ ಅದ್ರಲ್ಲೂ ದಕ್ಷಿಣ ಭಾರತದ ಸಿನಿಮಾವಾಗಿ ಆಸ್ಕರ್ ಪ್ರಶಸ್ತಿ ರೇಸ್ ಗೆ ಆಯ್ಕೆಯಾಗಿತ್ತು. 2021ನೇ ಸಾಲಿನ ಪ್ರತಿಷ್ಠಾತ್ಮಕ ಆಸ್ಕರ್ ಪ್ರಶಸ್ತಿ ಸುತ್ತಿಗೆ ಭಾರತದಿಂದ ಅಧಿಕೃತವಾಗಿ ಜಲ್ಲಿಕಟ್ಟು ಸಿನಿಮಾ ಆಯ್ಕೆಯಾಗಿತ್ತು. ಆದರೆ, ಆಸ್ಕರ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಜಲ್ಲಿಕಟ್ಟು ವಿಫಲವಾಗಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 2019 ರಂದು ಬಿಡುಗಡೆಯಾದ ಜಲ್ಲಿಕಟ್ಟು ಬಹಳ ವಿಭಿನ್ನವಾದ ಕತೆ ಹೊಂದಿದ್ದು, ಮಹತ್ವದ ಸಂದೇಶವನ್ನು ಕಟ್ಟಿಕೊಡುವ ಸಿನಿಮಾ ಆಗಿದೆ. ಸಿನಿಮಾವನ್ನು ಲಿಜೊ ಜೋಸ್ ಫೆಲ್ಲಿಸೆರಿ ನಿರ್ದೇಶಿಸಿದ್ದರು. ಜಲ್ಲಿಕಟ್ಟು ಸಿನಿಮಾ ವಿದೇಶಿ ಭಾಷಾ ಸಿನಿಮಾ ವಿಭಾಗದಲ್ಲಿ ಭಾರತದಿಂದ ಆಯ್ಕೆಯಾಗಿತ್ತು.
ಚಿತ್ರರಂಗ ಬೀದಿಗೆ ಇಳಿಯೋದ್ರಿಂದ ರೈತರ ಸಮಸ್ಯೆ ಪರಿಹಾರ ಆಗಲ್ಲ : ಶಿವಣ್ಣ
ಆದ್ರೆ ಆಸ್ಕರ್ ಸಮಿತಿ 2021ನೇ ಸಾಲಿನ ವಿದೇಶಿ ಭಾಷೆ ವಿಭಾಗದ ಸಿನಿಮಾಗಳ ಅಂತಿಮ ಪಟ್ಟಿಯನ್ನು ಪ್ರಕಟ ಮಾಡಿದ್ದು, 15 ಚಿತ್ರಗಳ ಪೈಕಿ ಜಲ್ಲಿಕಟ್ಟು ಸ್ಥಾನ ಪಡೆದುಕೊಂಡಿಲ್ಲ ಎಂಬುದು ಗೊತ್ತಾಗಿದೆ. ಭಾರತದಿಂದ ಆಸ್ಕರ್ ರೇಸ್ನಲ್ಲಿದ್ದ 27 ಚಿತ್ರಗಳನ್ನು ಹಿಂದಿಕ್ಕಿ ಜಲ್ಲಿಕಟ್ಟು ಟಿಕೆಟ್ ಪಡೆದುಕೊಂಡಿತ್ತು. ಚಪಾಕ್, ಶಕುಂತಲಾ ದೇವಿ, ಗುಲಾಬೊ ಸಿತಾಬೊ, ಚಲಾಂಗ್ ಸೇರಿದಂತೆ ಹಲವು ಸಿನಿಮಾಗಳನ್ನು ಹಿಂದಿಕ್ಕಿದ್ದ ಜಲ್ಲಿಕಟ್ಟು ಸಿನಿಮಾ ಆಸ್ಕರ್ ಗೆ ಹೋಗಿತ್ತು. ಆದರೆ, ಪ್ರಶಸ್ತಿ ಸುತ್ತಿನಲ್ಲಿ ಹಿಂದೆ ಬೀಳುವ ಮೂಲಕ ಭಾರತೀಯರಲ್ಲಿ ನಿರಾಸೆ ಮೂಡಿಸಿದೆ.
‘ಪುರುಷೋತ್ತಮ’ ದಲ್ಲಿ ನಾಯಕನಾಗಿ ಮಿಂಚಲಿದ್ದಾರೆ ಜಿಮ್ ರವಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel